Asianet Suvarna News Asianet Suvarna News

ಪೋಷಕರನ್ನು ಆಶ್ರಮಕ್ಕೆ ಕಳಿಸಿದ್ರೆ ರೂ.30000 ಕೊಡಿ

ಮಕ್ಕಳಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಈ ರೀತಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರು ಅಥವಾ ತಂದೆ-ತಾಯಂದಿರಿಗೆ ಮಕ್ಕಳು/ಸಂಬಂಧಿಕರು ನೀಡುವ ಮಾಸಾಶನವನ್ನು ಈಗಿನ 10 ಸಾವಿರ ರು.ನಿಂದ 25 ಸಾವಿರ ರು. ಅಥವಾ 30 ಸಾವಿರ ರು.ಗೆ ಹೆಚ್ಚಿಸಲು ಶಾಸನ ತಿದ್ದುಪಡಿಗೆ ಮುಂದಾಗಿದೆ.

Govt Rushes to Help Senior Citizens

ನವದೆಹಲಿ: ಮಕ್ಕಳಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಈ ರೀತಿ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರು ಅಥವಾ ತಂದೆ-ತಾಯಂದಿರಿಗೆ ಮಕ್ಕಳು/ಸಂಬಂಧಿಕರು ನೀಡುವ ಮಾಸಾಶನವನ್ನು ಈಗಿನ 10 ಸಾವಿರ ರು.ನಿಂದ 25 ಸಾವಿರ ರು. ಅಥವಾ 30 ಸಾವಿರ ರು.ಗೆ ಹೆಚ್ಚಿಸಲು ಶಾಸನ ತಿದ್ದುಪಡಿಗೆ ಮುಂದಾಗಿದೆ.

ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007 ಈಗಾಗಲೇ ಜಾರಿಯಲ್ಲಿದೆ. ಈ ಪ್ರಕಾರ ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟು) ಹಾಗೂ ಪಾಲಕರು (ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ) ವೃದ್ಧಾಶ್ರಮಗಳಲ್ಲಿದ್ದರೆ ಅವರಿಗೆ ಅವರ ಮಕ್ಕಳು ಮಾಸಿಕ 10 ಸಾವಿರ ರು. ನೀಡಬೇಕು ಎಂಬ ನಿಯಮವಿದೆ. ಆದರೆ ಇದು ಪಾಲಕರಿಗೆ ಸಾಲುತ್ತಿಲ್ಲ.

ಮೇಲಾಗಿ ಹಲವಾರು ಮಕ್ಕಳಿಗೆ ಹೆಚ್ಚಿನ ಮೊತ್ತ ನೀಡುವ ಶಕ್ತಿ ಇದ್ದರೂ ಕಾನೂನಿನ ನೆಪ ಹೇಳಿ ನೀಡುತ್ತಿಲ್ಲ. ಹೀಗಾಗಿ ಮೊತ್ತ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ತರಲಿದ್ದೇವೆ ಎಂದು ಸಾಮಾಜಿಕ ನ್ಯಾಯ ಇಲಾಖೆಯ ಕಾರ್ಯದರ್ಶಿ ಲತಾ ಕೃಷ್ಣರಾವ್‌ ಹೇಳಿದ್ದಾರೆ. ಹಣ ಕೊಡದೇ ಹೋದರೆ 3 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

Latest Videos
Follow Us:
Download App:
  • android
  • ios