Asianet Suvarna News Asianet Suvarna News

ರೈಲ್ವೆಯಲ್ಲಿ 36 ವರ್ಷದ ವಿಐಪಿ ಸಂಸ್ಕೃತಿಗೆ ಬ್ರೇಕ್

ರೈಲ್ವೆ ಇಲಾಖೆಯಲ್ಲಿ ವಿಐಪಿ ಸಂಸ್ಕೃತಿ ತೊಡೆದು ಹಾಕುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಅಭೂತಪೂರ್ವ ನಿರ್ಧಾರರವೊಂದನ್ನು ಕೈಗೊಂಡಿದೆ. ಅದರನ್ವಯ ರೈಲ್ವೆ ಮಂಡಳಿ ಅಧ್ಯಕ್ಷರು ಅಥವಾ ಮಂಡಳಿಯ ಇತರ ಸದಸ್ಯರು ವಲಯ ಭೇಟಿಗೆ ಬಂದಾಗ, ರೈಲ್ವೆ ನಿಲ್ದಾಣ ಅಥವಾ ವಿಮಾನ ನಿಲ್ದಾಣದಲ್ಲಿ ಜನರಲ್ ಮ್ಯಾನೇಜರ್‌'ಗಳು ಸ್ವತಃ ಹಾಜರಿರಬೇಕು ಎಂಬ 36 ವರ್ಷಗಳ ಶಿಷ್ಟಾಚಾರವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

Govt revokes 36 year old protocol to end VIP culture in Indian Railways

ನವದೆಹಲಿ(ಅ.09): ರೈಲ್ವೆ ಇಲಾಖೆಯಲ್ಲಿ ವಿಐಪಿ ಸಂಸ್ಕೃತಿ ತೊಡೆದು ಹಾಕುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಅಭೂತಪೂರ್ವ ನಿರ್ಧಾರರವೊಂದನ್ನು ಕೈಗೊಂಡಿದೆ. ಅದರನ್ವಯ ರೈಲ್ವೆ ಮಂಡಳಿ ಅಧ್ಯಕ್ಷರು ಅಥವಾ ಮಂಡಳಿಯ ಇತರ ಸದಸ್ಯರು ವಲಯ ಭೇಟಿಗೆ ಬಂದಾಗ, ರೈಲ್ವೆ ನಿಲ್ದಾಣ ಅಥವಾ ವಿಮಾನ ನಿಲ್ದಾಣದಲ್ಲಿ ಜನರಲ್ ಮ್ಯಾನೇಜರ್‌'ಗಳು ಸ್ವತಃ ಹಾಜರಿರಬೇಕು ಎಂಬ 36 ವರ್ಷಗಳ ಶಿಷ್ಟಾಚಾರವನ್ನು ಕೊನೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೆ, ಹಿರಿಯ ಅಧಿಕಾರಿಗಳಿಗೆ ಹೂಗುಚ್ಛ, ಉಡುಗೊರೆ ನೀಡುವಂತಿಲ್ಲ, ಹಿರಿಯ ಅಧಿಕಾರಿಗಳು ಮನೆ ಕೆಲಸಕ್ಕೆ ಇಲಾಖೆಯ ಸಿಬ್ಬಂದಿಯನ್ನಿರಿಸಿಕೊಳ್ಳು ವಂತಿಲ್ಲ ಮುಂತಾದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರೈಲ್ವೆ ಮಂಡಳಿಯ ಅಧ್ಯಕ್ಷರು, ಸದಸ್ಯರು ಆಗಮಿಸಿದಾಗ ವಲಯದ ಹಿರಿಯ ಅಧಿಕಾರಿಗಳು ಹಾಜರಿರಬೇಕಾದ ಶಿಷ್ಟಾಚಾರ ಕಡ್ಡಾಯಗೊಳಿಸಿರುವ 1981ರ ಸುತ್ತೋಲೆಯನ್ನು ಕೈಬಿಡಲು ರೈಲ್ವೆ ಮಂಡಳಿ ನಿರ್ಧರಿಸದೆ.

 ಸೆ. 28ರ ಸುತ್ತೋಲೆಯಲ್ಲಿ ಹೊಸ ಮಹತ್ವದ ನಿರ್ಧಾರಗಳ ಮಾಹಿತಿ ನೀಡಲಾಗಿದೆ. ಯಾವುದೇ ಸಮಯದಲ್ಲಿ ಅಧಿಕಾರಿ ಗಳು ಹೂಗುಚ್ಛ ಮತ್ತು ಉಡುಗೊರೆಗಳನ್ನು ನೀಡುವಂತಿಲ್ಲ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಹೇಳಿದ್ದಾರೆ. ಇದು ಹಿರಿಯ ಅಧಿಕಾರಿಗಳ ಕಚೇರಿಗಳಲ್ಲಿ ಮಾತ್ರವಲ್ಲ, ಮನೆಗಳಿಗೂ ಅನ್ವಯವಾಗುತ್ತದೆ. ಮನೆಗಳಲ್ಲೂ ಯಾವುದೇ ಉಡುಗೊರೆ, ಹೂಗುಚ್ಛ ಕೊಡುವಂತಿಲ್ಲ. ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಮನೆ ಕೆಲಸಗಳ ಸಹಾಯಕ್ಕಿರುವ ರೈಲ್ವೆ ಸಿಬ್ಬಂದಿ ಯನ್ನು ಬಿಡುಗಡೆಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.

ಸುಮಾರು 30000 ಸಿಬ್ಬಂದಿ ಹಿರಿಯ ಅಧಿಕಾರಿಗಳ ಮನೆ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನಲಾಗುತ್ತಿದೆ. ಅಂತಹವರು ತಮ್ಮ ಮೂಲ ಕರ್ತವ್ಯಗಳಿಗೆ ಹಾಜರಾಗುವಂತೆ ನಿರ್ದೇಶಿಸಲಾಗಿದೆ

 

Follow Us:
Download App:
  • android
  • ios