ಕಾಳಧನ ಹೊಂದಿರುವವರ ಬಗ್ಗೆ ಮಾಹಿತಿ ನೀಡಲು ಹಣಕಾಸು ಸಚಿವಾಲಯ ಕಳೆದ ಶುಕ್ರವಾರ blackmoneyinfo@incometax. gov.in  ಎಂಬ ಇ-ಮೇಲ್ ವಿಳಾಸ ಸೃಷ್ಟಿಸಿತ್ತು.

ನವದೆಹಲಿ (ಡಿ.20): ಕಾಳಧನ ಹೊಂದಿರುವವರ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ಇ-ಮೇಲ್ ವಿಳಾಸ ಘೋಷಿಸಿದ 72ಗಂಟೆಗಳಲ್ಲಿ ಸಾರ್ವಜನಿಕರಿಂದ 4000ಕ್ಕಿಂತಲೂ ಹೆಚ್ಚು ಸಂದೇಶಗಳು ಹರಿದುಬಂದಿವೆ.

ಕಾಳಧನ ಹೊಂದಿರುವವರ ಬಗ್ಗೆ ಮಾಹಿತಿ ನೀಡಲು ಹಣಕಾಸು ಸಚಿವಾಲಯ ಕಳೆದ ಶುಕ್ರವಾರ blackmoneyinfo@incometax. gov.in ಎಂಬ ಇ-ಮೇಲ್ ವಿಳಾಸ ಸೃಷ್ಟಿಸಿತ್ತು.

ಕಾಳಧನವನ್ನು ಮಟ್ಟಹಾಕುವಲ್ಲಿ ಸರ್ಕಾರ ರಚಿಸಿದ ಇ-ಮೇಲ್ ಕ್ರಮಕ್ಕೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ, ಸಾವಿರಾರು ಮೇಲ್’ಗಳು ಹರಿದು ಬರುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಳಾಸಕ್ಕೆ ಮೇಲ್ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದು ಹಣಕಾಸು ಇಲಾಖೆ ಹೇಳಿದೆ.