ನಿನ್ನೆ ಬೈಂದೂರಿನಲ್ಲಿ ನಡೆದ ಕಾಂಗ್ರೆಸ್  ಸಮಾ‍ವೇಶಕ್ಕೆ ಕೊಲ್ಲೂರು ದೇವಾಲಯದ ಊಟ ಸರಬರಾಜು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಉಡುಪಿ (ಜ.09): ನಿನ್ನೆ ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾ‍ವೇಶಕ್ಕೆ ಕೊಲ್ಲೂರು ದೇವಾಲಯದ ಊಟ ಸರಬರಾಜು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಲ್ಲಡ್ಕ ಶಾಲೆಗೆ ಕೊಡದ ಊಟ ಕಾಂಗ್ರೆಸ್ ಕಾರ್ಯಕರ್ತರಿಗೇಕೆ ಎಂಬ ಆಕ್ರೋಶದ ಮಾತು ಕೇಳಿ ಬಂದಿತ್ತು. ಆದರೆ ಈಗ ಕಾಂಗ್ರೆಸ್ ದೇವಸ್ಥಾನ ಆಡಳಿತ ಮಂಡಳಿಗೆ ಹಣ ಪಾವತಿಸಿ ವಿವಾದದಿಂದ ನುಣುಚಿಕೊಂಡಿದೆ. 1 ಲಕ್ಷ ರೂ.ಹಣವನ್ನು ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಹರೀಶ್ ಉಪ್ಪುಂದ ಅವರು ಪಾವತಿಸಿದ್ದಾರೆ. ಊಟಕ್ಕೆ ತಗಲಿದ ವೆಚ್ಚವನ್ನು ದೇವಸ್ಥಾನದ ಅಕೌಂಟ್'ಗೆ ಪಾವತಿ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ಸರ್ಕಾರಿ ದೇವಸ್ಥಾನದ ಊಟ ಕೊಡುವ ಅವಕಾಶವಿದೆ.ಆದರೂ ಹಣ ಪಾವತಿಸಿದ್ದೇವೆ ಎಂದು ನುಣುಚಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಸಾರ್ವಜನಿಕ ಆಕ್ರೋಶದಿಂದ ನುಣುಚಿಕೊಂಡಿದೆ.