ಸರ್ಕಾರಿ ಅಧಿಕಾರಿ ಬರೆದ ಪತ್ರ ವೈರಲ್ ಆಯ್ತು : ಆ ಪತ್ರದಲ್ಲಿ ಏನಿತ್ತು..?

First Published 5, Feb 2018, 10:18 AM IST
Govt Officer Letter viral
Highlights

ಸರ್ಕಾರಿ ಕಚೇರಿಗಳಲ್ಲಿ ಏನೇನೋ ನಾಪತ್ತೆಯಾದ್ರೂ ಯಾರೂ ಕೇಳೋರೇ ಇರಲ್ಲ. ಅಂಥದ್ದರಲ್ಲಿ ಕಿರಿಯ ಅಧಿಕಾರಿಯೊಬ್ಬರು ಬೆಂಕಿ ಪೊಟ್ಟಣ ಮರಳಿಸಿಲ್ಲ ಎಂದು ಬೇಸರಗೊಂಡ ಹಿರಿಯ ಅಧಿಕಾರಿಯೊಬ್ಬರು ನೊಂದು, ಪತ್ರ ಬರೆದಿದ್ದಾರೆ. ಆ ಪತ್ರವೀಗ ವೈರಲ್ ಆಗಿದೆ.

ಬರೇಲಿ(ಉತ್ತರಪ್ರದೇಶ): ಸರ್ಕಾರಿ ಕಚೇರಿಗಳಲ್ಲಿ ಏನೇನೋ ನಾಪತ್ತೆಯಾದ್ರೂ ಯಾರೂ ಕೇಳೋರೇ ಇರಲ್ಲ. ಅಂಥದ್ದರಲ್ಲಿ ಕಿರಿಯ ಅಧಿಕಾರಿಯೊಬ್ಬರು ಬೆಂಕಿ ಪೊಟ್ಟಣ ಮರಳಿಸಿಲ್ಲ ಎಂದು ಬೇಸರಗೊಂಡ ಹಿರಿಯ ಅಧಿಕಾರಿಯೊಬ್ಬರು ನೊಂದು, ಪತ್ರ ಬರೆದಿದ್ದಾರೆ. ಆ ಪತ್ರವೀಗ ವೈರಲ್ ಆಗಿದೆ.

ಪ್ರಕರಣ ಹಿನ್ನೆಲೆ: ಮೊರಾದಾಬಾದ್‌ನ ವಿದ್ಯುತ್ ಕಚೇರಿಯಲ್ಲಿ ಮೋಹಿತ್ ಎಂಬುವವರು ಜ.23ಕ್ಕೆ, ಹಿರಿಯ ಎಂಜಿನಿಯರ್ ಸುಶೀಲ್‌ರಿಂದ ಬೆಂಕಿಪೊಟ್ಟಣ ಪಡೆದುಕೊಂಡಿದ್ದರು. ಆದರೆ ವಾರವಾದರೂ ಮರಳಿ ಸಿರಲಿಲ್ಲ. ಇದಕ್ಕೆ ಸುಶೀಲ್ ಬರೆದ ಪತ್ರ ಹೀಗಿದೆ.

‘ಕಚೇರಿಯಲ್ಲಿ ಸೊಳ್ಳೆ ಬತ್ತಿ ಹಚ್ಚಲು ಇಡಲಾಗಿದ್ದ 19 ಮದ್ದು ಇದ್ದ ಬೆಂಕಿ ಪೊಟ್ಟಣವನ್ನು ತಾವು ಜ.23ರಂದು ಪಡೆದುಕೊಂಡಿದ್ದೀರಿ. ಬೇಸರದ ಸಂಗತಿಯೆಂದರೆ ವಾರವಾದರೂ, ಅದನ್ನು ನೀವು ಮರಳಿಸಿಲ್ಲ. ಹಾಗಾಗಿ, ಈ ಪತ್ರ ತಲುಪಿದ 2 ದಿನದಲ್ಲಿ ಬೆಂಕಿಪೊಟ್ಟಣ ವಾಪಸ್ ನೀಡಬೇಕು ಎಂದು ನಿರ್ದೇಶಿಸುತ್ತಿದ್ದೇನೆ’.

ಪತ್ರ ವೈರಲ್ ಆದ ಬಳಿಕ ಪ್ರತಿಕ್ರಿಯಿಸಿರುವ ಸುಶೀಲ್, ಹೊಸ ಸಿಬ್ಬಂದಿಗೆ ಪತ್ರ ಬರೆಯುವುದನ್ನು ತೋರಿಸಿಕೊಡಲು ಇದನ್ನು ಬರೆದಿದ್ದೆ ಎಂದಿದ್ದಾರೆ.

loader