ದೀಪಕ್ ರಾವ್ ಸಹೋದರಗೆ ಕೇಂದ್ರ ಸರ್ಕಾರಿ ನೌಕರಿ

Govt Job For Deepak Rao Brother
Highlights

ಮತೀಯ ಅಟ್ಟಹಾಸಕ್ಕೆ ಬಲಿಯಾದ ಸುರತ್ಕಲ್‌ನ ದೀಪಕ್‌ರಾವ್ ಕುಟುಂಬದ ಜೀವನಕ್ಕೆ ಕೇಂದ್ರ ಸರ್ಕಾರ ಆಧಾರವಾಗಿ ನಿಲ್ಲಲು ಮುಂದಾಗಿದೆ. ದೀಪಕ್ ಸೋದರ ಸತೀಶ್‌ಗೆ ಕೇಂದ್ರ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಆಫರ್ ಬಂದಿದೆ.

ಮಂಗಳೂರು : ಮತೀಯ ಅಟ್ಟಹಾಸಕ್ಕೆ ಬಲಿಯಾದ ಸುರತ್ಕಲ್‌ನ ದೀಪಕ್‌ರಾವ್ ಕುಟುಂಬದ ಜೀವನಕ್ಕೆ ಕೇಂದ್ರ ಸರ್ಕಾರ ಆಧಾರವಾಗಿ ನಿಲ್ಲಲು ಮುಂದಾಗಿದೆ. ದೀಪಕ್ ಸೋದರ ಸತೀಶ್‌ಗೆ ಕೇಂದ್ರ ಸ್ವಾಮ್ಯದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಆಫರ್ ಬಂದಿದೆ.

ಸಹೋದರ ಸತೀಶ್ ಅವರು ಒಂದಕ್ಷರವೂ ಕಲಿತಿಲ್ಲ. ಹುಟ್ಟಿನಿಂದಲೇ ಸತೀಶ್‌ಗೆ ಮಾತೂ ಬರುವುದಿಲ್ಲ, ಕಿವಿಯೂ ಕೇಳುತ್ತಿಲ್ಲ. ಹೀಗಾಗಿ ಅವರನ್ನು ಶಾಲೆಗೆ ಕಳುಹಿಸಲು ಹೆತ್ತವರಿಗೆ ಸಾಧ್ಯವಾಗಿಲ್ಲ. ಈಗ ಸತೀಶ್‌ಗೆ 28 ವರ್ಷ. ಸತೀಶ್‌ಗೆ ಪಣಂಬೂರಿನಲ್ಲಿರುವ ಕೆಐಒಸಿಎಲ್ ಕಂಪನಿಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ನೀಡಲು ಆಫರ್ ನೀಡಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಇತ್ತೀಚೆಗೆ ದೀಪಕ್ ಮನೆಗೆ ಭೇಟಿ ನೀಡಿದ್ದರು. ಆ ವೇಳೆ ಸಹೋದರ ಸತೀಶ್‌ಗೆ ಮಾನವೀಯ ನೆಲೆಯಲ್ಲಿ ಉದ್ಯೋಗದ ಭರವಸೆ ನೀಡಿದ್ದರು.

 ಅಂದೇ ಕೆಐಒಸಿಎಲ್‌ಗೆ ತೆರಳಿದ್ದ ಹೆಗಡೆ, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದರು. ಬಳಿಕ ಸತೀಶ್ ಅವರಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಂಡ ಕೆಐಒಸಿಎಲ್ ಅಧಿಕಾರಿಗಳು, ಸತೀಶ್‌ಗೆ ಕಂಪನಿಯಲ್ಲಿ ಕಾಯಂ ಉದ್ಯೋಗಕ್ಕೆ ಸಮ್ಮತಿ ಸೂಚಿಸಿದ್ದರು. 

ಇನ್ನು ಒಂದು ವಾರದೊಳಗೆ ಉದ್ಯೋಗ ನೇಮಕಾತಿ ಪತ್ರ ಸತೀಶ್ ಅವರ ಕೈಸೇರುವ ನಿರೀಕ್ಷೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಟೆಂಡರ್ ಅಥವಾ ಗ್ರೂಪ್ ಡಿ ಹುದ್ದೆಗೆ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಸತ್ಯಜಿತ್ ಸುರತ್ಕಲ್.

loader