ಮತ್ತೆ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ

https://static.asianetnews.com/images/authors/b348a094-0bef-5801-a1f6-61e57071185f.jpg
First Published 19, Jul 2018, 11:02 AM IST
Govt hikes sugarcane price
Highlights

ಕೇಂದ್ರ ಸರ್ಕಾರ ಇದೀಗ ಮತ್ತೆ ಬೆಂಬಲ ಬೆಲೆ ಏರಿಕೆ ಮಾಡುವ ಮೂಲಕ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. 

ನವದೆಹಲಿ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಂದ ಖರೀದಿಸುವ ಕಬ್ಬಿಗೆ ನೀಡುವ ಕನಿಷ್ಠ ಬೆಲೆಯನ್ನು ಟನ್‌ಗೆ 200 ರು. ಹೆಚ್ಚಿಸಲು  ಅಂದರೆ ಪ್ರತಿ ಟನ್‌ಗೆ 2750 ರು. ನಿಗದಿಪಡಿಸಲು ಕೇಂದ್ರ ಸರ್ಕಾರ ಬುಧವಾರ ನಿರ್ಧರಿಸಿದೆ. 

ಅಕ್ಟೋಬರ್‌ನಿಂದ ಆರಂಭಗೊಳ್ಳುವ 2018 - 19ರ ಮಾರುಕಟ್ಟೆ ವರ್ಷದಿಂದ ಕಬ್ಬಿಗೆ ನ್ಯಾಯಯೋಜಿತ ಹಾಗೂ ಸಂಭಾವ್ಯ ಬೆಲೆ (ಎಫ್ ಆರ್‌ಪಿ)ಯನ್ನು ಏರಿಸುವ ನಿರ್ಧಾರವನ್ನು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸರ್ಕಾರ ಇತ್ತೀಚೆಗೆ ಭತ್ತ ಸೇರಿದಂತೆ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ, ರೈತರಿಗೆ ಇನ್ನೊಂದು ಸಿಹಿ ಸುದ್ದಿ ನೀಡಿದೆ. 

ಕೃಷಿ ವೆಚ್ಚಗಳು ಹಾಗೂ ಬೆಲೆಗಳ ಆಯೋಗ ಪ್ರತಿ ಕ್ವಿಂಟಾಲ್ ಕಬ್ಬಿನ ನ್ಯಾಯಯೋಜಿತ ಹಾಗೂ  ಸಂಭಾವ್ಯ ಬೆಲೆಯನ್ನು ಮುಂದಿನ ಋತು ವಿನಿಂದ ಕ್ವಿಂಟಕ್‌ಗೆ 20 ರು. ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಇದರಂತೆ ಸರ್ಕಾರ ಖರೀದಿ ದರವನ್ನು ಏರಿಕೆ ಮಾಡಿದೆ. ಈ ಮುನ್ನ ಸಕ್ಕರೆ ಕಾರ್ಖಾನೆಗಳು ಪ್ರತಿ ಕ್ವಿಂಟಾಲ್ ಕಬ್ಬಿಗೆ 255 ರು. ನ್ಯಾಯಯೋಜಿತ ಬೆಲೆ ನೀಡುತ್ತಿದ್ದವು. 

loader