ಸರ್ಕಾರದ ಕೆಲಸ ದೆವರ ಕೆಲಸ ಅಂತಾರೆ ಆದ್ರೆ ರಾಯಚೂರಲ್ಲಿ ಮಾತ್ರ ರಾಜಕಾರಣಿಗಳ ಕೆಲಸವೇ ದೇವರ ಕೆಲಸ ಅಂತಾರೆ ರಾಜಕಾರಣಿಗಳು. ಸರ್ಕಾರದ ಸಂಬಳ, ಮಾಡುವ ಕೆಲಸ ಮಾತ್ರ ರಾಜಕಾರಣಿಗಳದ್ದು ಮಾತ್ರ. 'ರಾಜಕಾರಣಿಗಳ ಮನೆ ಕೆಲಸ ಸರ್ಕಾರಿ ಸಂಬಳ' ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ರಾಯಚೂರು(ಜ.11): ಸರ್ಕಾರದ ಕೆಲಸ ದೆವರ ಕೆಲಸ ಅಂತಾರೆ ಆದ್ರೆ ರಾಯಚೂರಲ್ಲಿ ಮಾತ್ರ ರಾಜಕಾರಣಿಗಳ ಕೆಲಸವೇ ದೇವರ ಕೆಲಸ ಅಂತಾರೆ ರಾಜಕಾರಣಿಗಳು. ಸರ್ಕಾರದ ಸಂಬಳ, ಮಾಡುವ ಕೆಲಸ ಮಾತ್ರ ರಾಜಕಾರಣಿಗಳದ್ದು ಮಾತ್ರ. 'ರಾಜಕಾರಣಿಗಳ ಮನೆ ಕೆಲಸ ಸರ್ಕಾರಿ ಸಂಬಳ' ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಜಿ.ಪಂ .ಸದಸ್ಯರ ಮನೆಯಲ್ಲಿ ನಗರಸಭೆ ಸಿಬ್ಬಂದಿ ಚಾಕ್ರಿ!
ಇದು ಯಾರ್ ಮನೆ ಗೊತ್ತಾ.. ಪ್ರಭಾವಿ ರಾಜಕಾರಣಿಗಳ ಮನೆ. ಇಟ್ ಮೀನ್ಸ್ ರಾಯಚೂರು ಜಿಲ್ಲಾ ಪಂಚಾಯತ್ ಸದಸ್ಯೆ.. ಜೆಡಿಎಸ್ ನಾಯಕಿ ಪದ್ಮಾವತಿ ಮನೆ. ಅಷ್ಟೇ ಅಲ್ಲದೆ ಇವರ ಮಗ ಪವನಕುಮಾರ್ ಕೂಡ ನಗರಸಭಾ ಸದಸ್ಯ. ಹೀಗಾಗೇ ಭಾರೀ ಪ್ರಭಾವಿಗಳು ಎಷ್ಟರ ಮಟ್ಟಿಗೆಂದರೆ, ಇವರ ಮನೆಯಲ್ಲಿ ಕೆಲಸ ಮಾಡುವವರೆಲ್ಲಾ ನಗರಸಭಾ ಸಿಬ್ಬಂದಿಗಳೇ. ಅಷ್ಟರ ಮಟ್ಟಿಗೆ ಪ್ರಭಾವಿಗಳು.
ನಿಜಕ್ಕೂ ಬೆಚ್ಚಿ ಬೀಳಿಸುವ ಘಟನೆ ಇದು. ಜೆಡ್'ಪಿ ಸದಸ್ಯೆ ಮನೆಯಲ್ಲಿ ಸರ್ಕಾರಿ ಸಂಬಳ ಪಡೆಯುವ ಸುಮಾರು ಎಂಟು ಮಂದಿ ನಗರಸಭೆ ನೌಕರರು ನಿತ್ಯವೂ ಕೆಲಸ ಮಾಡುತ್ತಿದ್ದಾರಂತೆ. ಇಂಥದ್ದೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದು ಪದ್ಮಾವತಿ ಮೇಡಮ್ ಪುತ್ರಿ ನಾಗಲತಾ. ಪದ್ಮಾವತಿ ಅವ್ರ ಮನೆಯಲ್ಲಿ ಪಾತ್ರೆ ತಿಕ್ಕುವುದರಿಂದ ಹಿಡಿದು, ನೀರು ತುಂಬಿಸುವುದು. ಗಾಡಿ ಒರೆಸುವುದು. ಹೀಗೆ ಮನೆಯ ಒಂದೊಂದು ಕೆಲಸಕ್ಕೂ ಒಂದೊಂದು ನೌಕರರು. ಇವರೆಲ್ಲರೂ ಸಂಬಳ ಪಡಿಯುವುದು ಮಾತ್ರ ಸರ್ಕಾರದಿಂದ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನ ಕೇಳಿದರೆ ಯಾರಿಂದಲೂ ಉತ್ತರವಿಲ್ಲ.
ಅಲ್ಲಾ ಸ್ವಾಮಿ, ಜನನಾಯಕರಾದವರು. ಅಧಿಕಾರಿಗಳ ಮೂಲಕ ಜನ ಸೇವೆ ಮಾಡಿಸುವುದು ಬಿಟ್ಟು. ತಮ್ಮ ಮನೆ ಸೇವೆ ಮಾಡಿಸಿಕೊಳ್ಳುತ್ತಿದ್ದಾರೆಂದರೆ ನಿಜಕ್ಕೂ ನಾಚಿಕೆ ಆಗ್ಬೇಕು. ಇಷ್ಟೆಲ್ಲಾ ಜನ ಇವರ ಮನೆಯಲ್ಲಿ ಕೆಲಸ ಮಾಡಿದರೆ, ಜನರ ಕೆಲಸ ಮಾಡುವವರು ಯಾರು. ಜನರಿಗೆ ಪ್ರಶ್ನಿಸಲು ಈ ಪ್ರಭಾವಿಗಳ ಭಯ. ಏನೇ ಆಗಲಿ ಅಧಿಕಾರ ದುರ್ಬಳಕೆ ಮಾಡಿಕೊಂಡವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
