Asianet Suvarna News Asianet Suvarna News

ರಕ್ತದಾನ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ

ರಕ್ತದಾನ ಮಾಡಲು ರಜೆ ಹಾಕುವ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನು ಮುಂದೆ ಆ ದಿನಕ್ಕೆ ವೇತನ ಲಭ್ಯವಾಗಲಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ತಿಳಿಸಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ ರಕ್ತದಾನ ಮಾಡುವ ನೌಕರರಿಗೆ ರಜೆ ನೀಡಲಾಗುತ್ತಿತ್ತು.

Govt employees to get paid leave for blood donation

ನವದೆಹಲಿ: ರಕ್ತದಾನ ಮಾಡಲು ರಜೆ ಹಾಕುವ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನು ಮುಂದೆ ಆ ದಿನಕ್ಕೆ ವೇತನ ಲಭ್ಯವಾಗಲಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ತಿಳಿಸಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ ರಕ್ತದಾನ ಮಾಡುವ ನೌಕರರಿಗೆ ರಜೆ ನೀಡಲಾಗುತ್ತಿತ್ತು.

ಆದರೆ,  ಆ ದಿನದ ವೇತನ ನೀಡುತ್ತಿರಲಿಲ್ಲ. ಹಾಗಾಗಿ ರಕ್ತ ದಾನ ಮಾಡುವ ಕೇಂದ್ರದ ನೌಕರರಿಗೆ ರಕ್ತದಲ್ಲಿನ ಪ್ಲೇಟ್‌ಲೆಟ್, ಪ್ಲಾಸ್ಮಾ ಸೇರಿ ಇತರ ಅಂಶಗಳ ವೃದ್ಧಿಗೆ ಸಹಕಾರಿಯಾಗಲು ರಜೆ ದಿನದ ವೇತನ ಭರಿಸುವ ಆದೇಶ ಹೊರಡಿಸಲಾಗಿದೆ. ವರ್ಷಕ್ಕೆ ನಾಲ್ಕು ಬಾರಿ ಕೇಂದ್ರ ನೌಕರರು ಈ ಅವಕಾಶ ಪಡೆಯಲು ಅರ್ಹರಾಗಿರಲಿದ್ದಾರೆ.

Follow Us:
Download App:
  • android
  • ios