ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಸ್; ಓಟಿಗಾಗಿ ಈ ನಿರ್ಧಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ

Govt Decides to Withdraw Complaints Against Minorities
Highlights

ಚುನಾವಣೆ  ಹತ್ತಿರವಾಗುತ್ತಿದ್ದಂತೆ  ಅಲ್ಪಸಂಖ್ಯಾತರ ಬೆನ್ನಿಗೆ ಸರ್ಕಾರ ನಿಂತಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.  ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಓಟ್​ ಬ್ಯಾಂಕ್​ ಪಾಲಿಟಿಕ್ಸ್ ಮಾಡುತ್ತಿದೆ ಎನ್ನುವುದಕ್ಕೆ ಸುವರ್ಣ ನ್ಯೂಸ್'ಗೆ ಎಕ್ಸ್'ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು (ಜ.26): ಚುನಾವಣೆ  ಹತ್ತಿರವಾಗುತ್ತಿದ್ದಂತೆ  ಅಲ್ಪಸಂಖ್ಯಾತರ ಬೆನ್ನಿಗೆ ಸರ್ಕಾರ ನಿಂತಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.  ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಓಟ್​ ಬ್ಯಾಂಕ್​ ಪಾಲಿಟಿಕ್ಸ್ ಮಾಡುತ್ತಿದೆ ಎನ್ನುವುದಕ್ಕೆ ಸುವರ್ಣ ನ್ಯೂಸ್'ಗೆ ಎಕ್ಸ್'ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಕೋಮು ಗಲಭೆ ಕೇಸ್ ವಾಪಸ್ ತೆಗೆದುಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ. ಅಲ್ಪ ಸಂಖ್ಯಾತರ ಓಲೈಕೆ ಮಾಡುತ್ತಾರೆ ಎನ್ನುವ ಟೀಕೆಗೆ ಪದೇ ಪದೇ ಗುರಿಯಾಗುವ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ  ಓಟ್ ಬ್ಯಾಂಕ್ ಪಾಲಿಟಿಕ್ಸ್'ಗೆ ಮುಂದಾಗಿದ್ದಾರೆ.  ಕಳೆದ 5 ವರ್ಷಗಳ  ಅವಧಿಯಲ್ಲಿ ಅಂದರೆ 2013 ರಿಂದ 2017 ರವರೆಗೆ  ಅಲ್ಪ ಸಂಖ್ಯಾತರ ಮೇಲೆ ದಾಖಲಾಗಿರುವ ಕೇಸ್​ಗಳನ್ನು ವಾಪಸ್​​ ತೆಗೆದುಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ  ಸರ್ಕಾರ 22 ಜಿಲ್ಲೆಗಳ ಪೊಲೀಸ್​ ಆಯುಕ್ತರು, ಎಸ್ಪಿಗಳ  ಅಭಿಪ್ರಾಯ ಕೇಳಿದೆ.  ಜನವರಿ 25ರಂದು ಎಲ್ಲ ಜಿಲ್ಲೆಗಳ ಆಯುಕ್ತರಿಗೆ ಸರ್ಕಾರ ರವಾನಿಸಿದ ಸುತ್ತೋಲೆ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

 

 

 

 

 

 

 

 

loader