ಅಮೃತಸರ:(ಡಿ.05): ಅಮೃತಸರದಲ್ಲಿ ನಡೆದ ‘ಹಾರ್ಟ್ ಆಫ್ ಏಷ್ಯಾ ಶೃಂಗ’ಕ್ಕೆ ಹಾಜರಾಗಿದ್ದ ತಮ್ಮ ಮೇಲೆ ಭಾರತ ಅನೇಕ ನಿರ್ಬಂಧ ಹೇರಿತ್ತು ಎಂಬ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅರೋಪವನ್ನು ಭಾರತ ಅಲ್ಲಗೆಳೆದಿದೆ.

ಸಮ್ಮೇಳನಕ್ಕೆ ಭೇಟಿ ನೀಡಿದ ಅಜೀಜ್‌ರನ್ನು ಸೌಜನ್ಯಶೀಲವಾಗಿ ನಡೆಸಿಕೊಳ್ಳಲಾಗಿತ್ತು. ಅವರ ಆರೋಪ ಸುಳ್ಳು ಎಂದು ಭಾರತದ ವಕ್ತಾರರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಪಾಕ್‌'ಗೆ ವಾಪಸಾದ ಅಜೀಜ್, ‘‘ಪಾಕ್ ಮಾಧ್ಯಮಗಳನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಸುದ್ದಿಗೋಷ್ಠಿಗೆ ಅನುಮತಿ ನೀಡಲಿಲ್ಲ, ಸ್ವರ್ಣಮಂದಿರಕ್ಕೆ ಹೋಗಲೂ ಬಿಡಲಿಲ್ಲ,’’ ಎಂದು ಆರೋಪಿಸಿದ್ದರು. ಆದರೆ, ಇದನ್ನು ಅಲ್ಲಗಳೆದಿರುವ ಭಾರತ, ‘‘ಅಜೀಜ್‌'ಗೆ ವಿಶೇಷ ಕೊಠಡಿ, ಶಸ್ತ್ರಸಜ್ಜಿತ ಕಾರು, ವಿಶೇಷ ಭದ್ರತೆ ನೀಡಲಾಗಿತ್ತು,’’ ಎಂದಿದೆ.