ಸರ್ಕಾರ ರಚಿಸಲು ತಮ್ಮ ಪರ ಆಡಳಿತ ಎನ್'ಪಿಎಫ್ ಪಕ್ಷದ 37 ಹಾಗೂ ನಾಲ್ವರು ಬಿಜೆಪಿಯವರು ಒಳಗೊಂಡು 7 ಪಕ್ಷೇತರ ಶಾಸಕರಿದ್ದಾರೆ. ಹಾಲಿ ಮುಖ್ಯಮಂತ್ರಿಗಳು ಜು.13ರೊಳಗೆ ರಾಜೀನಾಮೆ ನೀಡಬೇಕು ಒಂದು ವೇಳೆ ನೀಡದಿದ್ದರೆ ವಿಶ್ವಾಸ ಮತ ಪರೀಕ್ಷೆಗೆ ಮುಂದಾಗುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಕೊಹಿಮಾ(ಜು.11): ನಾಗಾಲ್ಯಾಂಡ್' ರಾಜಕೀಯದಲ್ಲಿ ಆಂತರಿಕ ಬಿಕ್ಕಟ್ಟು ಉಂಟಾದ ಹಿನ್ನಲೆಯಲ್ಲಿ ಹಾಲಿ ಮುಖ್ಯಮಂತ್ರಿ ಶುರ್ಹೋಲ್ಜೀ ಲೈಝೆಟ್ಸು ಅವರು ಜುಲೈ 13ರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಜ್ಯಪಾಲ ಪಿ.ಬಿ. ಆಚಾರ್ಯ ಸೂಚನೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಭಿನ್ನಮತೀಯ ನಾಯಕ ಟಿ.ಆರ್.ಝೆಲಿಯಾಂಗ್ ತಿಳಿಸಿದ್ದಾರೆ.
ಸರ್ಕಾರ ರಚಿಸಲು ತಮ್ಮ ಪರ ಆಡಳಿತ ಎನ್'ಪಿಎಫ್ ಪಕ್ಷದ 37 ಹಾಗೂ ನಾಲ್ವರು ಬಿಜೆಪಿಯವರು ಒಳಗೊಂಡು 7 ಪಕ್ಷೇತರ ಶಾಸಕರಿದ್ದಾರೆ. ಹಾಲಿ ಮುಖ್ಯಮಂತ್ರಿಗಳು ಜು.13ರೊಳಗೆ ರಾಜೀನಾಮೆ ನೀಡಬೇಕು ಒಂದು ವೇಳೆ ನೀಡದಿದ್ದರೆ ವಿಶ್ವಾಸ ಮತ ಪರೀಕ್ಷೆಗೆ ಮುಂದಾಗುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಝೆಲಿಯಾಂಗ್ ಬೆಂಬಲವಿರುವ ಶಾಸಕರು ಅಸ್ಸಾಂ'ನ ಕಾಜಿರಂಗಾ ಉದ್ಯಾನದ ಸಮೀಪವಿರುವ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ 4 ತಿಂಗಳ ಹಿಂದಷ್ಟೆ ಶುರ್ಹೋಲ್ಜೀ ಲೈಝೆಟ್ಸು ಅವರು ಝೆಲಿಯಾಂಗ್ ಅವರನ್ನು ಪದಚ್ಯತಗೊಳಿಸಿ ಸಿಎಂ ಪಟ್ಟಕ್ಕೇರಿದ್ದರು. ಈಗ ಅದೇ ಪರಿಸ್ಥಿತಿ ಝೆಲಿಯಾಂಗ್ ಅವರಿಗೂ ಒದಗಿ ಬಂದಿದೆ.