. ಶೀಘ್ರದಲ್ಲೇ ಲೋಕಾಯುಕ್ತರಾಗಿ ವಿಶ್ವನಾಥಶೆಟ್ಟಿ‌ ಅಧಿಕಾರ ವಹಿಸಿಕೊಳ್ಳುತ್ತಾರೆ.
ಬೆಂಗಳೂರು(ಜ.26): ನ್ಯಾ.ಮೂ.ವಿಶ್ವನಾಥ ಶೆಟ್ಟಿಯವರನ್ನು ನೂತನ ಲೋಕಾಯುಕ್ತರಾಗಿ ನೇಮಕಗೊಳಿಸುವ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ರಾಜ್ಯಪಾಲರು ಒಪ್ಪಿ ಕಡತಕ್ಕೆ ಸಹಿ ಮಾಡಿ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶೀಘ್ರದಲ್ಲೇ ಲೋಕಾಯುಕ್ತರಾಗಿ ವಿಶ್ವನಾಥಶೆಟ್ಟಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಮೊದಲ ಬಾರಿ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.
