ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ 2016ರ ಜೂನ್‌ನಿಂದ ಪ್ರತಿ ತಿಂಗಳು 4 ರು. ಏರಿಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು.
ನವದೆಹಲಿ(ಡಿ.28): ಕೇಂದ್ರ ಸರ್ಕಾರ ಗೃಹಿಣಿಯರಿಗೆ ಶುಭ ಸುದ್ದಿ ನೀಡಿದೆ. ಪ್ರತಿ ತಿಂಗಳು 4 ರೂ. ಎಲ್'ಪಿಜಿ ದರ ಏರಿಸುವ ಕ್ರಮವನ್ನು ಹಿಂತೆಗೆದುಕೊಂಡಿದೆ.
ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವ ಉಜ್ವಲ ಯೋಜನೆಗೆ ವಿರೋಧ ವ್ಯಕ್ತವಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ 2016ರ ಜೂನ್ನಿಂದ ಪ್ರತಿ ತಿಂಗಳು 4 ರು. ಏರಿಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಕಾರಣದಿಂದ ಕಳೆದ ವರ್ಷದ ಜುಲೈ ಬಳಿಕ ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್ಪಿಜಿ ದರವನ್ನು ಏರಿಕೆ ಮಾಡುತ್ತಿವೆ. ಅಂದಿನಿಂದ ಒಟ್ಟು 17 ತಿಂಗಳಿನಲ್ಲಿ ಎಲ್ಪಿಜಿ ದರ 76.5 ರೂ.ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಲಿಮಿಟೆಡ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಅಕ್ಟೋಬರ್ನಿಂದ ಎಲ್ಪಿಜಿ ದರವನ್ನು ಏರಿಕೆ ಮಾಡಿಲ್ಲ. 2018ರ ಮಾರ್ಚ್ ಒಳಗಾಗಿ ಎಲ್ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಉದ್ದೇಶದಿಂದ ಸರ್ಕಾರ ಹಂತ ಹಂತವಾಗಿ ಸಬ್ಡಿಡಿ ಕಡಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದು ಬಡವರ ವಿರೋಧಿ ಎಂಬ ಆರೋಪಗಳು ಕೇಳಿ ಬಂದ ಕಾರಣ ನಿರ್ಧಾರದಿಂದ ಹಿಂದೆ ಸರಿದಿದೆ.
