ತೆರಿಗೆ ಅಧಿಕಾರಿಗಳಿಗೆ ಕಾಳಧನಿಕರ ಬಗೆಗಿನ ಮಾಹಿತಿಯನ್ನು blackmoneyinfo@incometax.gov.in   ವಿಳಾಸಕ್ಕೆ ಮೇಲ್ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.

ನವದೆಹಲಿ (ಡಿ.16): ಕಾಳಧನ ಹೊಂದಿರುವವರ ಮಾಹಿತಿಯನ್ನು ಸರ್ಕಾರಕ್ಕೆ ನೀಡುವುದು ಇನ್ಮುಂದೆ ಸುಲಭ! ನಿಮ್ಮ ಸುತ್ತಮುತ್ತ ಯಾರಾದರೂ ಕಪ್ಪುಹಣ ಹೊಂದಿದ್ದಾರೆನ್ನುವ ಮಾಹಿತಿ ಸಿಕ್ಕರೆ ಒಂದು ಮೇಲ್ ಮಾಡಿದರೆ ಸಾಕು ತೆರಿಗೆ ಅಧಿಕಾರಿಗಳನ್ನು ತಲುಪಿ ಬಿಡುತ್ತದೆ. ಇದಕ್ಕಾಗಿಯೇ ಸರ್ಕಾರ ಈ ಮೇಲ್ ಐಡಿಯನ್ನು ಕ್ರಿಯೇಟ್ ಮಾಡಿದ್ದು ನೀವಿದಕ್ಕೆ ಮಾಹಿತಿಯನ್ನು ಕಳುಹಿಸಬಹುದು.

Add Asianetnews Kannada as a Preferred SourcegooglePreferred

ತೆರಿಗೆ ಅಧಿಕಾರಿಗಳಿಗೆ ಕಾಳಧನಿಕರ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಸಾರ್ವಜನಿಕರಿಗಾಗಿ ನೂತನ ಮೇಲ್ ಐಡಿಯನ್ನು ಮಾಡಲಾಗಿದೆ ಎಂದು ಆದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದಾರೆ.

blackmoneyinfo@incometax.gov.in ಈ ವಿಳಾಸಕ್ಕೆ ಮೇಲ್ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಅಡಿಯಲ್ಲಿ ಇದನ್ನು ಘೋಷಿಸಲಾಗಿದೆ. ಗರೀಬ್ ಕಲ್ಯಾಣ್ ಯೋಜನೆಗೆ

ಜನ ಸೇರುವುದರ ಮೂಲಕ ಬಡವರ ಕಲ್ಯಾಣಕ್ಕೆ ಕೊಡುಗೆ ನೀಡುವ ಉದ್ದೇಶಕ್ಕಾಗಿ ಮೇಲ್ ಐಡಿಯನ್ನು ಮಾಡಲಾಗಿದೆ ಎಂದು ಹಸ್ಮುಖ್ ಹೇಳಿದ್ದಾರೆ.