ದೀರ್ಘ ಸಮಯದಿಂದ ಯಾವುದೇ ವ್ಯಾಪಾರ ವಹಿವಾಟ ನಡೆಸದ ಕಂಪೆನಿಗಳ ನೋಂದಣಿ ರದ್ದು ಮಾಡಿ ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಕಪ್ಪು ಹಣವನ್ನು ತಡಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸುವ ಕ್ರಮಗಳಲ್ಲಿ ಇದು ಕೂಡಾ ಒಂದಂತೆ.
ನವದೆಹಲಿ(ಎ.22): ದೀರ್ಘ ಸಮಯದಿಂದ ಯಾವುದೇ ವ್ಯಾಪಾರ ವಹಿವಾಟ ನಡೆಸದ ಕಂಪೆನಿಗಳ ನೋಂದಣಿ ರದ್ದು ಮಾಡಿ ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಕಪ್ಪು ಹಣವನ್ನು ತಡಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸುವ ಕ್ರಮಗಳಲ್ಲಿ ಇದು ಕೂಡಾ ಒಂದಂತೆ.
ಯಾವುದೇ ವ್ಯಾಪಾರ ವಹಿವಾಟು ನಡೆಸದ ವಿಭಿನ್ನ ರಾಜ್ಯಗಳ ಎರಡು ಲಕ್ಷಕ್ಕೂ ಅಧಿಕ ಕಂಪೆನಿಗಳಿಗೆ ಕಾರಣ ತಿಳಿಸುವಂತೆ ಸೂಚಿಸಿ ಈಗಾಗಲೇ ನೋಟೀಸ್'ಗಳನ್ನು ಸರ್ಕಾರ ರವಾನಿಸಿದೆಯಂತೆ. ಕೇವಲ ಹೆಸರಿಗೆ ಕಂಪೆನಿ ಎಂದು ಹೇಳಿಕೊಂಡು, ಯಾವುದೇ ವಹಿವಾಟು ನಡೆಸದೆ ಮನಿ ಲ್ಯಾಂಡ್ರಿಂಗ್'ಗಾಗಿಯೇ ಬಳಸಲಾಗುತ್ತಿರುವ ಕಂಪೆನಿಗಳನ್ನು ಮಟ್ಟ ಹಾಕಲು ಈ ಯೋಜನೆ ಜಾರಿಗೊಳಿಸಲಾಗಿಉತ್ತಿದೆ ಎಂದು ತಿಳಿದು ಬಂದಿದೆ.
ನೋಟೀಸ್ ಪಡೆದವರು ತಮ್ಮ ಕಂಪೆನಿಯ ಅಸ್ಥಿತ್ವ ಉಳಿಸಿಕೊಳ್ಳಲು ಸೂಕ್ತ ಕಾರಣವನ್ನು ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಇವರು ನೀಡದ ಕಾರಣ ತೃಪ್ತಿಕರವಾಗಿಲ್ಲವೆಂದಾದರೆ ಸಚಿವಾಲಯ ನೋಂದಣಿಯನ್ನು ರದ್ದು ಮಾಡುವಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಲಭ್ಯವಾದ ಮಾಹಿತಿಯನ್ವಯ ಮುಂಬಯಿಯ 71,000 ಹಾಗೂ ದೆಹಲಿಯ 53,000ಕ್ಕೂ ಅಧಿಕ ಕಂಪಡನಿಗಳಿಗೆ ಸರ್ಕಾರ ಈ ನೋಟೀಸ್ ನೀಡಿದೆ ಎಂದು ತಿಳಿದು ಬಂದಿದೆ.
ಕೃಪೆ: NDTv
