ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರಡು ಕಾನೂನು ಪ್ರತಿಯನ್ನು ಅಂತಿಮಗೊಳಿಸಿದ್ದು, ಕಾನೂನು ಉಲ್ಲಂಘಿಸುವವರಿಗೆ ಜಾಮೀನು –ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶ ನೀಡಿದೆ.
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರಡು ಕಾನೂನು ಪ್ರತಿಯನ್ನು ಅಂತಿಮಗೊಳಿಸಿದ್ದು, ಕಾನೂನು ಉಲ್ಲಂಘಿಸುವವರಿಗೆ ಜಾಮೀನು –ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶ ನೀಡಿದೆ.
ಕರಡು ಕಾನೂನು ಪ್ರತಿಯನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡಲಾಗಿದ್ದು, ಸಲಹೆ-ಸೂಚನೆ, ಅಭಿಪ್ರಾಯವನ್ನು ತಿಳಿಸುವಂತೆ ಕೇಂದ್ರವು ಕೋರಿದೆ. ಆದರೆ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಲು ರಾಜ್ಯಸರ್ಕಾರಗಳ ಸಮ್ಮತಿಯ ಅಗತ್ಯವಿರುವುದಿಲ್ಲ. ಈ ಕಾನೂನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.
ರಾಜನಾಥ್ ಸಿಂಗ್ ನೇತೃತ್ವದ ಸಚಿವರುಗಳ ಸಮಿತಿಯು ಈ ಕರಡು-ಕಾನೂನನ್ನು ರೂಪಿಸಿದೆ. ವಿದೇಶಾಂಗ ಲಾಖೆ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಮಂತ್ರಿ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್ ಹಾಗೂ ಪಿ.ಪಿ. ಚೌಧರಿ ಈ ಸಮಿತಿಯ ಸದಸ್ಯರಾಗಿದ್ದಾರೆ.
ಕರಡು-ಕಾನೂನಿನ ಪ್ರಕಾರ, ತ್ರಿವಳಿ ತಲಾಖ್ ಸಂತ್ತಸ್ತೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಬಳಿಕ ಮೆಜಿಸ್ಟ್ರೇಟ್ ಮೊರೆಹೋಗಿ ತನ್ನ ಅಪ್ರಾಪ್ತ ಮಕ್ಕಳು, ಹಾಗೂ ಪತಿಯಿಂದ ನಿರ್ವಹಣಾ ಖರ್ಚನ್ನು ಪಡೆದುಕೊಳ್ಳಬಹುದಾಗಿದೆ.
ಮೌಖಿಕ, ಬರಹ ರೂಪದ ಅಥವಾ ಈ-ಮೇಲ್, ಎಸ್.ಎಸಂ.ಎಸ್, ವಾಟ್ಸಪ್’ನಂತಹ ಯಾವುದೇ ಇಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾಗುವ ತ್ರಿವಳಿ ತಲಾಖ್’ಗಳನ್ನು ಕರಡು-ಕಾನೂನಿನಲ್ಲಿ ನಿಷೇಧಿಸಲಾಗಿದೆ.
ಕಳೆದ ಗಸ್ಟ್’ನಲ್ಲಿ ತ್ರಿವಳಿ ತಲಾಖನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ, ಸುಮಾರು 67 ತ್ರಿವಳಿ ತಲಾಖ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿವೆ.
