ಪಿಎಫ್ ಮೇಲಿನ ಬಡ್ಡಿದರ 8.55 ನಿಗದಿ ಸಾಧ್ಯತೆ

Government Likely To Notify 8.55 Percent Interest On EPF
Highlights

2017-18 ನೇ ಸಾಲಿಗೆ ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಓ), 5 ವರ್ಷದ ಕನಿಷ್ಠ ಬಡ್ಡಿದರ ನಿಗದಿ ಮಾಡುವ ಸಾಧ್ಯತೆ ಇದೆ. 

ನವದೆಹಲಿ:  2017-18 ನೇ ಸಾಲಿಗೆ ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಓ), 5 ವರ್ಷದ ಕನಿಷ್ಠ ಬಡ್ಡಿದರ ನಿಗದಿ ಮಾಡುವ ಸಾಧ್ಯತೆ ಇದೆ. 

ಇಪಿಎಫ್ ಚಂದಾದಾರರಿಗೆ ಈ ಸಾಲಿನಲ್ಲಿ ಶೇ.8.55 ಬಡ್ಡಿ ಸಿಗುವ ಸಂಭವವಿದ್ದು, ಈ ವಾರ ಅಂಗೀಕಾರವಾಗುವ ಸಾಧ್ಯತೆ ಇದೆ. 

ಕರ್ನಾಟಕ ವಿಧಾನಸಭೆ ಚುನಾವಣೆ ಕಾರಣ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಡ್ಡಿದರ ನಿಗದಿಗೆ ಆಯೋಗದ ಅನುಮತಿಯನ್ನು ಮಂಡಳಿ ಬೇಡಿದೆ.

ಈ ಹಿಂಧೆ ಪಿಎಫ್ ಮೇಲಿನ ಬಡ್ಡಿದರ ಅನೇಕ ಬಾರಿ ಬದಲಾವಣೆ ಮಾಡಲಾಗಿತ್ತು. 2017 - 18ನೇ ಸಾಲಿನಲ್ಲಿ ಬಡ್ಡಿದರವು 8.65ರಷ್ಟಿತ್ತು. ಇನ್ನು 15- 16 ರಲ್ಲಿ 8.75ರಷ್ಟಿತ್ತು. ಆದರೆ ಈ ಬಾರಿ ಬಡ್ಡದರವನ್ನು 8.55ರಷ್ಟ ನಿಗದಿ ಮಾಡುವ ಸಾಧ್ಯತೆ ಇದೆ. 

loader