ಕಪ್ಪುಹಣದ ವಿರುದ್ಧ ಸಮರ ಸಾರಲು ಹೊರಟಿರುವ ಕೇಂದ್ರ ಸರ್ಕಾರ 'ಆಪರೇಶನ್ ಕ್ಲೀನ್ ಮನಿ' ಎನ್ನುವ ಹೊಸ ವೆಬ್'ಸೈಟನ್ನು ಶುರು ಮಾಡಿದೆ.
ನವದೆಹಲಿ (ಮೇ.16): ಕಪ್ಪುಹಣದ ವಿರುದ್ಧ ಸಮರ ಸಾರಲು ಹೊರಟಿರುವ ಕೇಂದ್ರ ಸರ್ಕಾರ 'ಆಪರೇಶನ್ ಕ್ಲೀನ್ ಮನಿ' ಎನ್ನುವ ಹೊಸ ವೆಬ್ ಸೈಟನ್ನು ಶುರು ಮಾಡಿದೆ.
ಈ ನೂತನ ವೆಬ್ ಸೈಟ್ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಹಾಯಕವಾಗಲಿದೆ. ತೆರಿಗೆಯನ್ನು ತಪ್ಪಿಸಿ ಹಣವನ್ನು ಇಟ್ಟುಕೊಳ್ಳುವುದು ಬಹಳ ಕಾಲದವರೆಗೆ ಉಳಿಯುವುದಿಲ್ಲವೆಂದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
91 ಲಕ್ಷ ಮಂದಿ ಆದಾಯ ತೆರಿಗೆ ವ್ಯಾಪ್ತಿಗೆ ಬರಲಿದ್ದಾರೆ. ಮುಂದಿನ ದಿನಗಳಲ್ಲಿ ತೆರಿಗೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಡಿಮಾನೆಟೈಸೇಶನ್ ನಂತರ ತೆರಿಗೆ ಸಂಗ್ರಹ ಹೆಚ್ಚಾಗಿದೆ. ನೂತನವಾಗಿ ಪ್ರಾರಂಭಿಸಿರುವ ಆಪರೇಶನ್ ಕ್ಲೀನ್ ಮನಿ ವೆಬ್ ಸೈಟ್ ಪ್ರಾಮಾಣಿಕ ತೆರಿಗೆದಾರರಿಗೆ ಸಹಾಯಕವಾಗಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
