ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವೀಗ ಗುಡ್ ನ್ಯೂಸ್ ಒಂದನ್ನು ನೀಡಿದೆ. ಜಿಪಿಎಫ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.
ನವದೆಹಲಿ: ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಹಾಗೂ ಇದೇ ರೀತಿಯ ಇತರ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದ ಅವಧಿಗೆ ಶೇ.0.4ರಷ್ಟು ಏರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಣ್ಣ ಉಳಿತಾಯ ಖಾತೆಗಳಾದ ಎಸ್‌ಎಸ್‌ಸಿ ಹಾಗೂ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮೇಲಿನ ಬಡ್ಡಿದರವನ್ನು ಕೂಡ ಶೇ.8ಕ್ಕೆ ಏರಿಕೆ ಮಾಡಲಾಗಿದೆ.
2018- 19ರ ಜುಲೈ- ಸೆಫ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಜಿಪಿಎಫ್ ಮೇಲಿನ ಬಡ್ಡಿದರ ಶೇ.7.6ರಷ್ಟು ಇತ್ತು.
