ಕೇಂದ್ರ ಸರ್ಕಾರಿ ನೌಕರರಿಗೆ ಗುಡ್’ನ್ಯೂಸ್!

First Published 7, Mar 2018, 9:13 PM IST
Government hikes dearness allowance from five per cent to seven per cent
Highlights

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. 7 ನೇ ವೇತನಾ ಆಯೋಗದ ಶಿಫಾರಸ್ಸುಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಅದರಂತೆ ಎಲ್ಲಾ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ. 5 ರಿಂದ 7 ಕ್ಕೇರಿಸಲಾಗಿದೆ. ಇದು 2018, ಜನವರಿ 1 ರಿಂದ ಅನ್ವಯವಾಗಲಿದೆ. 

ನವದೆಹಲಿ (ಮಾ.07): ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ. 7 ನೇ ವೇತನಾ ಆಯೋಗದ ಶಿಫಾರಸ್ಸುಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಅದರಂತೆ ಎಲ್ಲಾ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ. 5 ರಿಂದ 7 ಕ್ಕೇರಿಸಲಾಗಿದೆ. ಇದು 2018, ಜನವರಿ 1 ರಿಂದ ಅನ್ವಯವಾಗಲಿದೆ. 

ಇದುವರೆಗೂ ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ 2016, ಜು. 1 ರ ಪ್ರಕಾರ ಶೇ. 5 ರಷ್ಟು ಭತ್ಯೆ ನೀಡಲಾಗುತ್ತಿತ್ತು. 

48.41 ಲಕ್ಷ ಉದ್ಯೋಗಿಗಳು, 61.17 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. 
 

loader