ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ.ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ. ಕೆಲವು ನಿಬಂಧನೆಗಳನ್ನು ಹೇರಿ ಕಾರ್ಮಿಕ ಇಲಾಖೆ ಆದೇಶ ಮಾಡಿದೆ.

ಬೆಂಗಳೂರು(ಡಿ.22): ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ.ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಮತ್ತೆ ಆದೇಶ ಹೊರಡಿಸಿದೆ. ಕೆಲವು ನಿಬಂಧನೆಗಳನ್ನು ಹೇರಿ ಕಾರ್ಮಿಕ ಇಲಾಖೆ ಆದೇಶ ಮಾಡಿದೆ.

ಮಹಿಳೆಯರ ರಾತ್ರಿ ಪಾಳಿಗೆ ನಿಬಂಧನೆಗಳು

- ರಾತ್ರಿ ಪಾಳಿಯಲ್ಲಿ ಮಹಿಳೆ ಕೆಲಸ ಮಾಡಲು ಬಯಸಿದರೆ ಮಾತ್ರ ಅವಕಾಶ.

- ರಾತ್ರಿ ಪಾಳಿಯಲ್ಲಿ ಒಬ್ಬರಿಗಿಂತ.ಹೆಚ್ಚು ಮಹಿಳೆಯರು ಇರಬೇಕು.

- ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಇರಬೇಕು.

- ಮಹಿಳೆಯರನ್ನು ಡ್ರಾಪ್ ಮಾಡುವ ವ್ಯವಸ್ಥೆ ಇರಬೇಕು.

- ಮೊದಲು ಪಿಕ್.ಮಾಡಿ ಮೊದಲು ಡ್ರಾಪ್ ಮಾಡಬೇಕು.

- ಮಹಿಳೆಯರು ಕೆಲಸ ಮಾಡುವಲ್ಲಿ ರಾತ್ರಿ ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಬೇಕು.

- ಡ್ರಾಪ್ ಮಾಡುವ ವಾಹನ ಚಾಲಕನ ಸಂಪೂರ್ಣ

- ಮಾಹಿತಿ ಪಡೆದಿರಬೇಕು.

- ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯ ಬಗ್ಗೆ ಅಪರಿಚಿತ ವ್ಯಕ್ತಿಗೆ ಮಾಹಿತಿ ನೀಡುವಂತಿಲ್ಲ.

- ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅವಕಾಶ.

- ನಿಯಮ ಉಲ್ಲಂಘಿಸುವ ಸಂಸ್ಥೆಯ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ