ಸೆ.28 ರಂದು ಭಾರತೀಯ ಯೋಧರು ಸರ್ಜಿಕಲ್ ದಾಳಿ ನಡೆಸಿ ತಮ್ಮ ಪರಾಕ್ರಮ ಮೆರೆದಿದ್ದರೆ, ಸೆ.30ರಂದು ರಕ್ಷಣಾ ಸಚಿವಾಲಯವು, ಗಾಯಗೊಂಡು ಸೇನೆಯಿಂದ ನಿವೃತ್ತರಾಗಿರುವ ಯೋಧರ ಪಿಂಚಣಿಯಲ್ಲಿ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿ ಯೋಧರಿಗೆ ಶಾಕ್ ನೀಡಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವಿಸ್ತೃತ ವರದಿ ಮಾಡಿದೆ.
ಒಂದೆಡೆ ಸರ್ಜಿಕಲ್ ದಾಳಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆಯೆಂದು ಕೇಂದ್ರ ಸರ್ಕಾರ ಹೆಮ್ಮೆಯಿಂದ ಬೀಗುತ್ತಿದ್ದರೆ, ಇನ್ನೊಂದೆಡೆ ಅಂಗವೈಕಲ್ಯವುಂಟಾಗಿ ಸೇನೆಯಿಂದ ನಿವೃತ್ತರಾಗಿರುವ ಯೋಧರ ಪಿಂಚಣಿಯನ್ನು ಕಡಿತಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿ ಯೋಧರಿಗೆ ಅಘಾತ ನೀಡಿದೆ.
ಸೆ.28 ರಂದು ಭಾರತೀಯ ಯೋಧರು ಸರ್ಜಿಕಲ್ ದಾಳಿ ನಡೆಸಿ ತಮ್ಮ ಪರಾಕ್ರಮ ಮೆರೆದಿದ್ದರೆ, ಸೆ.30ರಂದು ರಕ್ಷಣಾ ಸಚಿವಾಲಯವು, ಗಾಯಗೊಂಡು ಸೇನೆಯಿಂದ ನಿವೃತ್ತರಾಗಿರುವ ಯೋಧರ ಪಿಂಚಣಿಯಲ್ಲಿ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿ ಯೋಧರಿಗೆ ಶಾಕ್ ನೀಡಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವಿಸ್ತೃತ ವರದಿ ಮಾಡಿದೆ.
ಶೇ.100ರಷ್ಟು ಅಂಗವೈಕಲ್ಯವುಂಟಾದ ಕಿರಿಯ ಯೋಧರ ಪಿಂಚಣಿಯಲ್ಲಿ ರೂ.18 ಸಾವಿರ ಕಡಿತಗೊಳಿಸಲಾಗಿದೆ. ಅವರಿಗೆ ಸಿಗುತ್ತಿದ್ದ ರೂ.45,200 ಪಿಂಚಣಿಯನ್ನು ಕಡಿತಗೊಳಿಸಿ ರೂ.27,200ಕ್ಕೆ ಇಳಿಸಲಾಗಿದೆ. ಅದೇ ವಿಭಾಗದ ಹಿರಿಯ ಅಧಿಕಾರಿಗಳಿಗೆ ಇನ್ನೂ ದೊಡ್ಡ ಶಾಕ್ ನೀಡಲಾಗಿದೆ. ಅವರ ಪಿಂಚಣಿಯಲ್ಲಿ ರೂ.70,000 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.
ಸೇನೆಯ ಬೆನ್ನೆಲುಬು ಎಂದೇ ಹೇಳಲಾಗುವ ‘ಜೂನಿಯರ್ ಕಮಿಷನ್ಡ್ ಆಫಿಸರ್’ಗಳ ಪಿಂಚಣಿಯನ್ನು ರೂ.40,000ದಷ್ಟು ಕಡಿತಗೊಳಿಸಲಾಗಿದೆ.
ಇನ್ನು ಮೇಜರ್ ಹುದ್ದೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು ಮಾಸಿಕ 98,300 ರೂ ಪಿಂಚಣಿ ಪಡೆಯುತ್ತಿದ್ದು. ಸೇವೆಯಲ್ಲಿದ್ದಾಗಲೇ ಶೇ.100% ಅಂಗವೈಕಲ್ಯಕ್ಕೆ ತುತ್ತಾದರೆ ಅವರು ಕೇವಲ 27,000 ರೂಪಾಯಿಗಳನ್ನು ಮಾತ್ರ ಪಡೆಯಲಿದ್ದಾರೆ. ಒಟ್ಟಾರೆ ಸರ್ಕಾರ ಈ ಹೊಸ ನೀತಿಯನ್ನು ಪ್ರಕಟಿಸುವ ಮೂಲಕ ಸೈನಿಕರ ಬಗ್ಗೆ ಧ್ವಂದ್ವ ನಿಲುವು ತಳೆದಂತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸರ್ಕಾರದ ಕ್ರಮದಿಂದ ಅಘಾತವಾಗಿದೆಯೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರ್ಕಾರವು ನಮ್ಮ ಬೆನ್ನಿಗೆ ಇರಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.