Asianet Suvarna News Asianet Suvarna News

2ನೇ ಶನಿವಾರದ ರಜೆಯಲ್ಲಿ ಬದಲಾವಣೆ ಇಲ್ಲ

2 ನೇ ಶನಿವಾರವೇ ರಜೆ, 3ನೇ ಶನಿವಾರ ಇಲ್ಲ | ಅ.20 ರ ಮೂರನೇ ಶನಿವಾರ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ 

Government clarifies no change in 2 nd Saturday leave
Author
Bengaluru, First Published Oct 12, 2018, 9:30 AM IST
  • Facebook
  • Twitter
  • Whatsapp

ಬೆಂಗಳೂರು (ಅ. 12): ಎರಡನೇ ಶನಿವಾರದ ರಜೆ ಕುರಿತು ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರವು ತೆರೆ ಎಳೆದಿದ್ದು, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಅ.13ರ ಎರಡನೇ ಶನಿವಾರ ರಜೆ ಇರುವುದನ್ನು ರದ್ದುಪಡಿಸಿ ಅ.20ರಂದು ರಜೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿಸಲಾಗಿತ್ತು. ದಸರಾ ಪ್ರಯುಕ್ತ ಗುರುವಾರ, ಶುಕ್ರವಾರ ಸರ್ಕಾರಿ ರಜೆ ಇದ್ದು, ಅ.20ರ ಮೂರನೇ ಶನಿವಾರದಂದು ಸರ್ಕಾರಿ ಸಿಬ್ಬಂದಿ ರಜೆ ಹಾಕಲಿದ್ದಾರೆ.

ಹೀಗಾಗಿ ಎರಡನೇ ಶನಿವಾರ ಬದಲಿಗೆ ಮೂರನೇ ಶನಿವಾರ ರಜೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅ.20 ರ ಮೂರನೇ ಶನಿವಾರ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios