ಬಾಗ್ಲೆ ಈ ಮುಂಚೆ ವಿದೇಶಾಂಗ ಇಲಾಖೆಯ ಪಾಕಿಸ್ತಾನ ಜತೆ ವ್ಯವಹರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಾಕಿಸ್ತಾನದಲ್ಲಿ ಡೆಪ್ಯೂಟಿ ಹೈಕಮಿಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ನವದೆಹಲಿ (ಫೆ.28): ವಿದೇಶಾಂಗ ಲಾಖೆಗೆ ನೂತನ ವಕ್ತಾರರಾಗಿ ಹಿರಿಯ ಐಎಫ್ಎಸ್ ಅಧಿಕಾರಿ ಗೋಪಾಲ್ ಬಾಗ್ಲೆ ಅವರನ್ನು ಸರ್ಕಾರ ನೇಮಿಸಿದೆ.
1992 ಬ್ಯಾಚ್’ನ ಐಎಫ್ಎಸ್ ಬಾಗ್ಲೆ ಅವರು ವಿಕಾಸ್ ಸ್ವರೂಪ್’ರ ಸ್ಥಾನವನ್ನು ತುಂಬಲಿದ್ದಾರೆ. ಬಾಗ್ಲೆ ಈ ಮುಂಚೆ ವಿದೇಶಾಂಗ ಇಲಾಖೆಯ ಪಾಕಿಸ್ತಾನ ಜತೆ ವ್ಯವಹರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಾಕಿಸ್ತಾನದಲ್ಲಿ ಡೆಪ್ಯೂಟಿ ಹೈಕಮಿಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ವಿಕಾಸ್ ಸ್ವರೂಪ್ ಅವರನ್ನು ಕೆನಾಡದ ರಾಯಭಾರಿಯಾಗಿ ನೇಮಿಸಲಾಗಿದೆ.
