Asianet Suvarna News Asianet Suvarna News

ಸರ್ಕಾರಿ ಶಾಲಾ ಹುಡಗನಿಗೆ ಗೂಗಲ್ ನೌಕರಿ; ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

ಚಂಡಿಗಢದ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬನನ್ನು ಸಾಫ್ಟ್’ವೇರ್ ದೈತ್ಯ ಗೂಗಲ್ ನೇಮಿಸಿಕೊಂಡಿದೆಯೆಂದು  ವರದಿಯಾಗಿದೆ.  16 ವರ್ಷ ಪ್ರಾಯದ ಹರ್ಶಿತ್ ಶರ್ಮಾ ಈ ತಿಂಗಳಾಂತ್ಯದಲ್ಲಿ ಗೂಗಲ್’ನ ಗ್ರಾಫಿಕ್ಸ್ ಡಿಸೈನ್ ತಂಡವನ್ನು ಸೇರಿಕೊಳ್ಳಿಲಿದ್ದಾರೆಂದು ಹೇಳಲಾಗಿದೆ.

Google hires 16 year old Chandigarh boy from government school at an annual salary of Rs 1 plus  crore

ನವದೆಹಲಿ: ಚಂಡಿಗಢದ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬನನ್ನು ಸಾಫ್ಟ್’ವೇರ್ ದೈತ್ಯ ಗೂಗಲ್ ನೇಮಿಸಿಕೊಂಡಿದೆಯೆಂದು  ವರದಿಯಾಗಿದೆ.  16 ವರ್ಷ ಪ್ರಾಯದ ಹರ್ಶಿತ್ ಶರ್ಮಾ ಈ ತಿಂಗಳಾಂತ್ಯದಲ್ಲಿ ಗೂಗಲ್’ನ ಗ್ರಾಫಿಕ್ಸ್ ಡಿಸೈನ್ ತಂಡವನ್ನು ಸೇರಿಕೊಳ್ಳಿಲಿದ್ದಾರೆಂದು ಹೇಳಲಾಗಿದೆ.

ಚಂಡಿಗಢದ ಸೆಕ್ಟರ್ 33ರಲ್ಲಿರುವ ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಹರ್ಶಿತ್ ಒಂದು ವರ್ಷ ಗೂಗಲ್’ನಲ್ಲಿ ತರಬೇತಿ ಪಡೆಯಲಿದ್ದಾನೆ. ಆ ಅವಧಿಯಲ್ಲಿ  ಆತನಿಗೆ ಪ್ರತಿ ತಿಂಗಳು ರೂ. 4 ಲಕ್ಷ ವಿದ್ಯಾರ್ಥಿವೇತನ ಸಿಗಲಿದೆ.  ತರಬೇತಿ ಮುಗಿದ ಬಳಿಕ ಪ್ರತಿ ತಿಂಗಳು ರೂ. 12 ಲಕ್ಷ (ವರ್ಷಕ್ಕೆ ರೂ. 1.44 ಕೋಟಿ) ಸಂಬಳ ಪಡೆಯಲಿದ್ದಾನೆಯೆಂದು ವರದಿಯಾಗಿದೆ.

ಆನ್’ಲೈನ್’ನಲ್ಲಿ ಉದ್ಯೋಗ ಹುಡುಕುತ್ತಿದ್ದೆ.  ಕಳೆದ ಮೇ ನಲ್ಲಿ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ.  ಆನ್’ಲೈನ್ ಸಂದರ್ಶನ ನಡೆಯಿತು. ಕಳೆದ 10 ವರ್ಷಗಳಿಂದ ನಾನು ಗ್ರಾಫಿಕ್ಸ್ ವಿನ್ಯಾಸ ಕೆಲಸದಲ್ಲಿ ತೊಡಗಿದ್ದೇನೆ. ನಾನು ವಿನ್ಯಾಸಗೊಳಿಸಿದ ಪೋಸ್ಟರ್’ಗಳನ್ನು ನೋಡಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಹರ್ಶಿತ್ ಈ ಸಂದರ್ಭದಲ್ಲಿ ತಿಳಿಸಿದ್ದಾನೆ.

ಶಾಲಾ ಬಿಡುವಿನ ಸಮಯದಲ್ಲಿ ತಾನು ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರಿಗಾಗಿ ಪೋಸ್ಟರ್ ವಿನ್ಯಾಸ ಮಾಡುತ್ತಿದ್ದೆ, ಹಾಗೂ ಪ್ರತಿ ಪೋಸ್ಟರ್’ಗೆ ಸುಮಾರು 40-50 ಸಾವಿರ ಹಣ ಸಂಪಾದಿಸುತ್ತಿದ್ದೆ ಎಂದು  ಸ್ಥಳೀಯ ಮಾಧ್ಯಮಗಳಿಗೆ ಹರ್ಶಿತ್ ತಿಳಿಸಿದ್ದಾನೆ.

ಹರ್ಯಾಣದ ಕುರುಕ್ಷೇತ್ರದಲ್ಲಿರುವ ಮಥಾನ ಗ್ರಾಮಕ್ಕೆ ಸೇರಿದ ಹರ್ಶಿತ್  11 ನೇ ತರಗತಿಯಲ್ಲಿ ಮಾಹಿತಿ ತಂತ್ರಜ್ಞಾನ ಕಲಿತಿದ್ದಾನೆ. ಆತನ ಹೆತ್ತವರು ಶಿಕ್ಷಕರಾಗಿದ್ದಾರೆ. ಪ್ರಧಾನಿ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಹರ್ಶಿತ್ ಈ ಹಿಂದೆ ರೂ.7000 ಬಹುಮಾನವನ್ನು ಪಡೆದಿದ್ದಾನೆ.

Follow Us:
Download App:
  • android
  • ios