ವಿಶ್ವದ ಅತೀ ದೊಡ್ಡ ವೆಬ್ ಪೋರ್ಟಲ್ ಸಂಸ್ಥೆ ಗೂಗಲ್ ಭಾರತದ ಸಾಮಾನ್ಯ ಜನರ ಪರವಾಗಿ ನಿಂತಿದೆ. ಈಗಾಗಲೇ ಜನರು ನೋಟು ಎಕ್ಸ್‌ಚೆಂಜ್‌ಗಾಗಿ ದಿಕ್ಕೇ ಕಾಣದಾಗಿರೋ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹತ್ತಿರದ ಎಟಿಎಂಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಇಂಟರ್‌ನೆಟ್ನಲ್ಲಿ ಗೂಗಲ್ ವೆಬ್ ಪೇಜ್ ಒಪನ್ ಮಾಡುತ್ತಿದ್ದಂತೆ ಫೈಂಡ್ ಆನ್ ಎಟಿಎಂ ನಿಯರ್ ಯೂ ಅಂದ್ರೆ ನಿಮ್ಮ ಹತ್ತಿರದ ಎಟಿಎಂ ಅನ್ನು ಪತ್ತೆ ಹಚ್ಚಿಕೊಳ್ಳಿ ಅನ್ನೋ ಮುಖ ಪುಟವನ್ನೇ ಬಿಡುಗಡೆ ಮಾಡಿದೆ. ಈಗಾಗಲೇ ಈ ಪೇಜ್ ಮೂಲಕ 28 ಲಕ್ಷ ಜನ ಹತ್ತಿರದ ಎಟಿಎಂಗಳನ್ನು ಹುಡುಕಿಕೊಂಡಿರೋದು ಗೂಗಲ್ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಬೆಂಗಳೂರು (ನ.17):ದೇಶವನ್ನೇ ತಲ್ಲಣಗೊಳಿಸಿರೋ ನೋಟು ಬದಲಾವಣೆ ವಿಚಾರ ಕೇವಲ ದೇಶವನ್ನೇ ಅಲ್ಲ ವಿಶ್ವದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಶ್ವದ ಅತೀ ದೊಡ್ಡ ವೆಬ್ ಪೋರ್ಟಲ್ ಸಂಸ್ಥೆ ಗೂಗಲ್ ಭಾರತದ ಸಾಮಾನ್ಯ ಜನರ ಪರವಾಗಿ ನಿಂತಿದೆ. ಈಗಾಗಲೇ ಜನರು ನೋಟು ಎಕ್ಸ್ಚೆಂಜ್ಗಾಗಿ ದಿಕ್ಕೇ ಕಾಣದಾಗಿರೋ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹತ್ತಿರದ ಎಟಿಎಂಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಇಂಟರ್ನೆಟ್ನಲ್ಲಿ ಗೂಗಲ್ ವೆಬ್ ಪೇಜ್ ಒಪನ್ ಮಾಡುತ್ತಿದ್ದಂತೆ ಫೈಂಡ್ ಆನ್ ಎಟಿಎಂ ನಿಯರ್ ಯೂ ಅಂದ್ರೆ ನಿಮ್ಮ ಹತ್ತಿರದ ಎಟಿಎಂ ಅನ್ನು ಪತ್ತೆ ಹಚ್ಚಿಕೊಳ್ಳಿ ಅನ್ನೋ ಮುಖ ಪುಟವನ್ನೇ ಬಿಡುಗಡೆ ಮಾಡಿದೆ. ಈಗಾಗಲೇ ಈ ಪೇಜ್ ಮೂಲಕ 28 ಲಕ್ಷ ಜನ ಹತ್ತಿರದ ಎಟಿಎಂಗಳನ್ನು ಹುಡುಕಿಕೊಂಡಿರೋದು ಗೂಗಲ್ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನೀವು ಬಳಸುತ್ತಿರುವ ಇಂಟರ್ನೆಟ್ ಸರ್ವರ್ ಐಪಿ ಮೂಲಕ ನೀವಿರುವ ಜಾಗದ ಮಾಹಿತಿಯೊಂದಿಗೆ ಹತ್ತಿರದ ಎಟಿಎಂ ಅನ್ನು ಹುಡುಕಲು ಸಹಾಯ ಮಾಡಿದೆ.
