ಗೂಗಲ್‌ನ ಬಹುಕಾಲದ ಉದ್ಯೋಗಿಯಾಗಿರುವ ಪಿಚೈ ಅವರನ್ನು 2015ರ ಆಗಸ್ಟ್‌ನಲ್ಲಿ ಸಿಇಒ ಹುದ್ದೆಗೇರಿಸಲಾಗಿತ್ತು. ಪಿಚೈ ಅವರು ಬಡ್ತಿ ಪಡೆದಿರುವುದು ಹಾಗೂ ಹಲವಾರು ಯಶಸ್ವಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಭಾರಿ ವೇತನ ನೀಡಲಾಗಿದೆ ಎಂದು ಕಂಪನಿಯ ವೇತನ ಪ್ಯಾಕೇಜ್ ಸಮಿತಿ ತಿಳಿಸಿದೆ.
ಹೂಸ್ಟನ್(ಏ.29): ಜಗದ್ವಿಖ್ಯಾತ ಕಂಪನಿ ಗೂಗಲ್ನ ಭಾರತೀಯ ಮೂಲದ ಸಿಇಒ ಸುಂದರ್ ಪಿಚೈ ಅವರು 2016ನೇ ಸಾಲಿನಲ್ಲಿ 1200 ಕೋಟಿ ರು. (200 ಮಿಲಿಯನ್ ಡಾಲರ್) ವೇತನ ಪ್ಯಾಕೇಜ್ ಗಳಿಸಿದ್ದಾರೆ. 2015ನೇ ಸಾಲಿಗೆ ಹೋಲಿಸಿದರೆ ಇದು ದುಪ್ಪಟ್ಟು ಮೊತ್ತವಾಗಿದೆ.
ವೇತನ ರೂಪದಲ್ಲಿ ಪಿಚೈ ಅವರಿಗೆ ಕಳೆದ ವರ್ಷ 4.17 ಕೋಟಿ ರು. ಬಂದಿದೆ. 2015ನೇ ಸಾಲಿನಲ್ಲಿ ದೊರೆತಿದ್ದ 4.20 ಕೋಟಿ ರು.ಗೆ ಹೋಲಿಸಿದರೆ ಇದು ಕೊಂಚ ಕಡಿಮೆ. ಆದರೆ 2016ನೇ ಸಾಲಿನಲ್ಲಿ ಪಿಚೈ ಅವರಿಗೆ ಷೇರುಗಳ ರೂಪದಲ್ಲಿ 1277 ಕೋಟಿ ರು. ಸಿಕ್ಕಿದೆ. 2015ನೇ ಸಾಲಿನಲ್ಲಿ ದೊರೆತಿದ್ದ 641 ಕೋಟಿ ರು.ಗೆ ಹೋಲಿಸಿದರೆ ಇದು ಡಬಲ್ ಆಗಿದೆ ಎಂದು ಸಿಎನ್ಎನ್ ಮಾಧ್ಯಮ ವರದಿ ಮಾಡಿದೆ.
ಗೂಗಲ್ನ ಬಹುಕಾಲದ ಉದ್ಯೋಗಿಯಾಗಿರುವ ಪಿಚೈ ಅವರನ್ನು 2015ರ ಆಗಸ್ಟ್ನಲ್ಲಿ ಸಿಇಒ ಹುದ್ದೆಗೇರಿಸಲಾಗಿತ್ತು. ಪಿಚೈ ಅವರು ಬಡ್ತಿ ಪಡೆದಿರುವುದು ಹಾಗೂ ಹಲವಾರು ಯಶಸ್ವಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಭಾರಿ ವೇತನ ನೀಡಲಾಗಿದೆ ಎಂದು ಕಂಪನಿಯ ವೇತನ ಪ್ಯಾಕೇಜ್ ಸಮಿತಿ ತಿಳಿಸಿದೆ.
ಪಿಚೈ ಅವರ ಅವಯಲ್ಲಿ ಜಾಹೀರಾತು ಹಾಗೂ ಯುಟ್ಯೂಬ್ ವ್ಯವಹಾರದಲ್ಲಿ ಕಂಪನಿಗೆ ಭಾರಿ ಆದಾಯ ಬಂದಿದೆ. 2016ನೇ ಸಾಲಿನಲ್ಲಿ ಗೂಗಲ್ ಕಂಪನಿ ಹೊಸ ಸ್ಮಾರ್ಟ್'ಫೋನ್'ಗಳು, ಹೆಡ್ಸೆಟ್, ರೂಟರ್ ಹಾಗೂ ಧ್ವನಿ ನಿಯಂತ್ರಿತ ಸ್ಮಾರ್ಟ್ ಸ್ಪೀಕರ್ಗಳನ್ನು ಬಿಡುಗಡೆ ಮಾಡಿದೆ.
