Asianet Suvarna News Asianet Suvarna News

ಪ್ರಯಾಣಿಕರ ಗಮನಕ್ಕೆ: ಈ ಕೆಳಕಂಡ ರೈಲುಗಳಲ್ಲಿ ಪ್ರಯಾಣ ದರ ಕಡಿತ

ಕರ್ನಾಟಕದ ನೈರುತ್ಯ ರೈಲ್ವೆ ವಿಭಾಗದ ಆಯ್ದ 5 ರೈಲುಗಳ ಎಸಿ ಬೋಗಿಗಳಲ್ಲಿ ಪ್ರಯಾಣ ದರವನ್ನು ಕಡಿಮೆಗೊಳಿಸಲಾಗಿದೆ.

 

Good news! Indian Railways fares for AC travel reduced in these trains; check list here
Author
Bengaluru, First Published Aug 14, 2018, 8:02 PM IST

ನವದೆಹಲಿ[ಆ.14]: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲ ಹಾಗೂ ಪ್ರೋತ್ಸಾಹ ನೀಡುವ ಸಲುವಾಗಿ 5 ಎಕ್ಸ್'ಪ್ರೆಸ್  ರೈಲುಗಳ ಎಸಿ ಕೋಚ್'ಗಳು ಹಾಗೂ ಚೇರ್ ಕಾರ್'ಗಳ ಬೋಗಿಗಳ ಪ್ರಯಾಣ ದರವನ್ನು ಕಡಿಮೆಗೊಳಿಸಿದೆ. ಸಂತಸದ ವಿಷಯವೆಂದರೆ ಈ 5 ರೈಲುಗಳು ನೈರುತ್ಯ ರೈಲ್ವೆಯದಾಗಿದ್ದು ಎಲ್ಲವೂ ಕರ್ನಾಟಕದ ಮೂಲಕ ಸಂಚರಿಸುವ ರೈಲುಗಳು.

ಪ್ರಯಾಣ ದರ ಕಡಿಮೆಗೊಂಡ ರೈಲುಗಳ ಪಟ್ಟಿ

1]ಗದಗ್-ಮುಂಬೈ ಎಕ್ಸ್'ಪ್ರೆಸ್ : ಪ್ರಯಾಣ ದರ ರೂ.  495 ರೂ.ಗಳಿಂದ 435 ರೂ.ಗಳಿಗೆ ಕಡಿಮೆ. ಮಹಾರಾಷ್ಟ್ರದ ಸೊಲ್ಲಾಪುರದ ಪಶ್ಚಿಮ ಭಾಗದವರೆಗೆ.  ನವೆಂಬರ್ 11 ರಿಂದ ಜಾರಿ.

2]ಮೈಸೂರು - ಶಿರಡಿ ವೀಕ್ಲಿ ಎಕ್ಸ್'ಪ್ರೆಸ್ : ಮೈಸೂರು ಹಾಗೂ ಬೆಂಗಳೂರು ನಡುವೆ ರೂ. 495 ರಿಂದ 260 ರೂಗಳವರೆಗೆ ಕಡಿಮೆ. ಡಿಸೆಂಬರ್ 3 ರಿಂದ ಜಾರಿ.

3] ಯಶವಂತಪುರ - ಬಿಕನೇರ್ ಎಕ್ಸ್'ಪ್ರೆಸ್ : ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ರೂ. 735 ರಿಂದ 590ರವರೆಗೂ ಕಡಿಮೆ. ನವೆಂಬರ್ 30 ರಿಂದ ಜಾರಿ.

4]ಯಶವಂತಪುರ - ಸಿಕಂದರಬಾದ್ ಎಕ್ಸ್'ಪ್ರೆಸ್: ರೂ. 345 ರಿಂದ 305 ರವರೆಗೆ ಕಡಿಮೆ. ನವೆಂಬರ್ 22 ರಿಂದ ಜಾರಿ.

5) ಯಶವಂತಪುರ - ಹುಬ್ಬಳ್ಳಿ ವೀಕ್ಲಿ ಎಕ್ಸ್'ಪ್ರೆಸ್ : ರೂ. 735 ರಿಂದ 590 ರವರೆಗೆ ಕಡಿಮೆ. ನವೆಂಬರ್ ನಿಂದ ಜಾರಿ

Follow Us:
Download App:
  • android
  • ios