ಮಹಿಳಾ ಕೋಟಾದಡಿ ಕಾಯ್ದಿರಿಸಿ ಬಳಕೆಯಾಗದ ರೈಲ್ವೆ ಸೀಟುಗಳನ್ನು ವೇಟಿಂಗ್‌ಲಿಸ್ಟ್‌ನಲ್ಲಿರುವ ಮಹಿಳಾ ಪ್ರಯಾಣಿಕರಿಗೇ ಮೊದಲು ಆದ್ಯತೆ ನೀಡಿ ಸೀಟು ಹಂಚಿಕೆ ಮಾಡಬೇಕು ಎಂದು ರೈಲ್ವೆ ಇಲಾಖೆ ನಿರ್ಧರಿಸಿದೆ.

ನವದೆಹಲಿ: ಮಹಿಳಾ ಕೋಟಾದಡಿ ಕಾಯ್ದಿರಿಸಿ ಬಳಕೆಯಾಗದ ರೈಲ್ವೆ ಸೀಟುಗಳನ್ನು ವೇಟಿಂಗ್‌ಲಿಸ್ಟ್‌ನಲ್ಲಿರುವ ಮಹಿಳಾ ಪ್ರಯಾಣಿಕರಿಗೇ ಮೊದಲು ಆದ್ಯತೆ ನೀಡಿ ಸೀಟು ಹಂಚಿಕೆ ಮಾಡಬೇಕು ಎಂದು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ರೈಲ್ವೆ ಮಂಡಳಿಯು ಎಲ್ಲಾ ಟಿಕೆಟ್‌ ತಪಾಸಕರಿಗೆ ಸೂಚನೆ ನೀಡಿದ್ದು, ಕಾಯ್ದಿರಿಸಿದ ರೈಲ್ವೆ ಸೀಟುಗಳ ಹಂಚಿಕೆ ಚಾರ್ಟ್‌ ಸಿದ್ಧಪಡಿಸಿದ ನಂತರ ಮಹಿಳಾ ಕೋಟಾದಡಿ ಸೀಟು ಪಡೆದು ಭರ್ತಿಯಾಗದಿದ್ದಾಗ, ವೈಟಿಂಗ್‌ ಲಿಸ್ಟ್‌ನಲ್ಲಿರುವ ಮಹಿಳಾ ಪ್ರಯಾಣಿಕರಿಗೇ ಮೊದಲು ಆದ್ಯತೆ ನೀಡಿ ಸೀಟು ಹಂಚಬೇಕು, ನಂತರ ಹಿರಿಯ ನಾಗರಿಕರಿಗೆ ಮೀಸಲಿರಿಸಬೇಕು ಎಂದು ಹೇಳಿದೆ.

ಈ ಮೊದಲು ಕಾಯ್ದಿರಿಸಿದ ರೈಲ್ವೆ ಸೀಟುಗಳು ಭರ್ತಿಯಾಗದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ, 45 ವರ್ಷ ತುಂಬಿದ ಮಹಿಳಾ ಪ್ರಯಾಣಿಕರಿಗೆ ಮತ್ತು ಗರ್ಭಿಣಿಯರಿಗೆ ನೀಡಲಾಗುತ್ತಿತ್ತು.