ಐಆರ್’ಸಿಟಿಸಿಯು ಮುಂಗಡ ಟಿಕೆಟ್ ಹಾಗೂ ಟಿಕೆಟ್ ರದ್ದುಗೊಳಿಸುವ ಅರ್ಜಿಯಲ್ಲಿ ಪುರುಷ ಹಾಗೂ ಮಹಿಳೆಯೊಂದಿಗೆ ತೃತೀಯ ಲಿಂಗಿಯರನ್ನು ಸೇರ್ಪಡೆಗೊಳಿಸಿದೆ.
ನವದೆಹಲಿ (ನ.27): ರೈಲ್ವೆ ಇಲಾಖೆ ತೃತೀಯ ಲಿಂಗಿ ಪ್ರಯಾಣಿಕರಿಗೊಂದು ಗುಡ್ ನ್ಯೂಸ್ ನೀಡಿದೆ. ಐಅರ್’ಸಿಟಿಸಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಮಹಿಳೆ ಮತ್ತು ಪುರುಷರಿಗೆ ಮಾತ್ರ ಅರ್ಜಿಯಲ್ಲಿ ಅವಕಾಶ ನೀಡಲಾಗಿತ್ತು.
ಆದರೆ ಈಗ ಐಆರ್’ಸಿಟಿಸಿಯು ಮುಂಗಡ ಟಿಕೆಟ್ ಹಾಗೂ ಟಿಕೆಟ್ ರದ್ದುಗೊಳಿಸುವ ಅರ್ಜಿಯಲ್ಲಿ ಪುರುಷ ಹಾಗೂ ಮಹಿಳೆಯೊಂದಿಗೆ ತೃತೀಯ ಲಿಂಗಿಯರನ್ನು ಸೇರ್ಪಡೆಗೊಳಿಸಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಅರ್ಜಿಗಳಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಅದರಂತೆ ಇಂದಿನಿಂದ ನೂತನ ಅರ್ಜಿಗಳನ್ನು ಹೊರತರಲಾಗಿದ್ದು, ಅರ್ಜಿಯಲ್ಲಿ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಎಂಬ ಮೂರು ಲಿಂಗಗಳಿಗೆ ಅವಕಾಶ ನೀಡಲಾಗಿದೆ.
