ಮುಂಗಾರಲ್ಲಿ ಉತ್ತಮ ಮಳೆ ಸುರಿದರೆ ಒಂದಿಷ್ಟು ಸಮಸ್ಯೆಗಳಿಗೆ ತನ್ನಿಂದ ತಾನೆ ಉತ್ತರ ಸಿಕ್ಕಿ ಬಿಡುತ್ತದೆ. ವಿದ್ಯುತ್ ಸಮಸ್ಯೆ, ರಾಜ್ಯಗಳ ನಡುವಿನ ಜಲಾಶಯದ ನೀರಿಗಾಗಿ ಗೊಂದಲ ತನ್ನಿಂದ ತಾನೆ ಬಗೆಹರಿದು ರೈತರು ನೆಮ್ಮದಿ ಕಾಣಬಹುದು. ಈ ಬಾರಿಯ ಮಂಗಾರಿಗೆ ಧನ್ಯವಾದ ಹೇಳಬೇಕಿದೆ.

ಬೆಂಗಳೂರು[ಜು.10] ಈ ಸಾರಿ ಮುಂಗಾರು ಮಳೆ ಚೆನ್ನಾಗಿ ಆಗಿರುವುದರಿಂದ ಕಾವೇರಿ ನೀರಿಗಾಗಿ ಎರಡು ರಾಜ್ಯಗಳ ನಡುವೆ ಕಿತ್ತಾಟ ತಂದು ಇಡುವ ಲಕ್ಷಣಗಳು ಕಡಿಮೆಯಾಗಿದೆ. ಎರಡು ರಾಜ್ಯದ ರೖತರು ಬಯಸುತ್ತಿರುವುದು ಇದೆ. 

ಕೇರಳದ ವೈನಾಡು ಹಾಗೂ ಮಡಿಕೇರಿಯಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ಜೂನ್ ತಿಂಗಳಿನಲ್ಲಿಯೇ 24 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ. ಈಗ ಜುಲೈ ತಿಂಗಳ ಬಾಕಿ 31.7 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ.ಸದ್ಯ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 36,000 ಕ್ಯುಸೆಕ್ ನೀರು ಹರಿದು ಹೋಗುತ್ತಿದೆ ಜತೆಗೆ ಕೆ.ಆರ್.ಎಸ್ ಜಲಾಶಯದಿಂದ 3,400 ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.

ಈಗಾಗಲೇ 113 ಅಡಿ ದಾಖಲಿಸಿರುವ ಜಲಾಶಯಕ್ಕೆ 33,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದೇ ಪ್ರಮಾಣದಲ್ಲಿ ಮಳೆಯಾದರೆ ಇನ್ನು ಆರು ದಿನದಲ್ಲಿ ಕೆ.ಆರ್.ಎಸ್ ಭರ್ತಿಯಾಗಲಿದೆ. 49.5 ಟಿಎಂಸಿ ಒಟ್ಟು ನೀರಿನ ಸಾಮರ್ಥ್ಯದಲ್ಲಿ ಈಗ 35 ಟಿಎಂಸಿ ಲಭ್ಯವಿದೆ.