ಗಾಲ್ಫ್ ಕ್ಲಬ್ ಬರೀ 5000ರೂ. ಬಾಡಿಗೆ!

First Published 4, Mar 2018, 1:21 PM IST
Golf Club Rent Just 5K
Highlights

ವಹಿವಾಟನ್ನು ಗಾಲ್ಫ್ ಕ್ಲಬ್ ನಡೆಸುತ್ತಿದ್ದು, ಇದರಲ್ಲಿ ಶೇ.2ರಷ್ಟು ಅಂದರೆ 16 ಲಕ್ಷ ರೂ. ವಾರ್ಷಿಕ ಬಾಡಿಗೆ ನೀಡುವಂತೆ ಪರಿಷ್ಕರಣೆ ಮಾಡಲಾಗಿದೆ.

ನಗರದ ಗಾಲ್ಫ್ ಕ್ಲಬ್ ಬಾಡಿಗೆ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ವರ್ಷ ಗಾಲ್ಫ್ ಕ್ಲಬ್ ನಡೆಸುವ ವಹಿವಾಟಿನ ಶೇ.2 ಹಣವನ್ನು ಬಾಡಿಗೆ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪ್ರಸ್ತುತ ವಾರ್ಷಿಕ 5 ಸಾವಿರ ರೂ. ಮಾತ್ರ ಬಾಡಿಗೆ ನೀಡಲಾಗುತ್ತಿದೆ. ಪ್ರಸ್ತುತ ವಾರ್ಷಿಕ 8 ಕೋಟಿ ರೂ. ವಹಿವಾಟನ್ನು ಗಾಲ್ಫ್ ಕ್ಲಬ್ ನಡೆಸುತ್ತಿದ್ದು, ಇದರಲ್ಲಿ ಶೇ.2ರಷ್ಟು ಅಂದರೆ 16 ಲಕ್ಷ ರೂ. ವಾರ್ಷಿಕ ಬಾಡಿಗೆ ನೀಡುವಂತೆ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ವರ್ಷವೂ ಎಷ್ಟು ವಹಿವಾಟು ನಡೆಸುತ್ತದೆಯೋ ಅದರಲ್ಲಿ ಶೇ.2 ಬಾಡಿಗೆ ರೂಪದಲ್ಲಿ ಪಾವತಿಸಬೇಕು ಎಂದು ಟಿ.ಬಿ. ಜಯಚಂದ್ರ ತಿಳಿಸಿದರು.

loader