ಚಿನ್ನ ಖರೀರಿದಾರರಿಗೆ  ಬಂಪರ್ ಸುದ್ದಿ: ಒಂದೇ ದಿನ ದಾಖಲೆ ಕುಸಿತ

ನವದೆಹಲಿ(ಸೆ.09): ಚಿನ್ನ ಖರೀದಿದಾರರಿಗೆ ಬಂಪರ್ ಸುದ್ದಿ. ಚಿನ್ನದ ಬೆಲೆ ಒಂದೆ ದಿನ 820 ರು. ಇಳಿಕೆಯಾಗಿ, 10 ಗ್ರಾಂಗೆ 30,530ಕ್ಕೆ ನಿಂತಿದೆ. ಸ್ಥಳೀಯ ಜ್ಯುವೆಲ್ಲರ್‌ಗಳಿಂದ ಬೇಡಿಕೆ ಕುಸಿತವಾದ ಕಾರಣ ಈ ಬೆಳವಣಿಗೆಗೆ ಕಾರಣವಾಗಿದೆ. ಇದು ವರ್ಷದಲ್ಲೇ ಒಂದೇ ದಿನದಲ್ಲಿ ನಡೆದ ಅತಿದೊಡ್ಡ ಇಳಿಕೆಯಾಗಿದೆ. ಆದರೆ ಬೆಳ್ಳಿಯ ಬೆಲೆ ಅಷ್ಟೆ ಇದ್ದು, ಕೆಜಿಗೆ 42,000ರಷ್ಟಿದೆ. ಶುಕ್ರವಾರ ದೆಹಲಿಯಲ್ಲಿ ಒಂದೇ ದಿನ ಚಿನ್ನದ ಬೆಲೆ 990 ರು. ಹೆಚ್ಚಾಗಿತ್ತು. ಇದು ಕೂಡ ದಾಖಲೆ ಏರಿಕೆಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred