ಸ್ನೇಹಿತರೆ ತೆರಿಗೆ ಬಗ್ಗೆ ಭಯ ಬೇಡ. ಜಿಎಸ್'​ಟಿ ಬಗ್ಗೆ ಅಸಡ್ಡೆಯೂ ಬೇಡ. ಅಸಡ್ಡೆ ಮಾಡಿದ್ರೆ ಮುಂದೊಂದು ದಿನ ನೀವೇ ಅಪಾಯಕ್ಕೆ ಸಿಲುಕಿಕೊಳ್ತೀರ ಜೋಕೆ. ಚಿನ್ನದ ಬೇಟೆ ಕುರಿತು ಇಂದು ಬೆಳಗ್ಗೆ 10 ಗಂಟೆಗೆ ವಿಶೇಷ ಚರ್ಚೆ ನಡೆಯಲಿದ್ದು, ತಪ್ಪದೇ ವೀಕ್ಷಿಸಿ...

ಬೆಂಗಳೂರು(ನ.11): ಚಿನ್ನ ಪ್ರಿಯರೇ ಗಮನಿಸಿ. ಬಂಗಾರದಂಗಡಿಯಲ್ಲಿ ನಡೀತಿದೆ ಮಹಾಮೋಸ. ಲಾಭಕ್ಕೆ ಚಿನ್ನದಂಗಡಿಗಳು ಮಾಡುತ್ತಿವೆ ದೇಶದ್ರೋಹ. ನಮ್ಮ ಕವರ್ ಸ್ಟೋರಿ ಬಯಲು ಮಾಡಿದ ಚಿನ್ನದಂಗಡಿಯ ಮಹಾ ಮೋಸದ ಬಗ್ಗೆ ಒಂದು ಕ್ಷಣ ಗಮನ ಕೊಟ್ಟು ಆ ಬಳಿಕ ಮುಂದುವರೆಯಿರಿ.

ಜಿಎಸ್'ಟಿ ಜಾರಿಯಾದ ಬಳಿಕವೂ ಬಿಲ್ ಇಲ್ಲದೇ, ಟ್ಯಾಕ್ಸ್ ಇಲ್ಲದೆಯೇ ವ್ಯವಹಾರ ನಡೆಸುವ ರಾಜಧಾನಿ ಬೆಂಗಳೂರಿನ ಅವಿನ್ಯೂ ರಸ್ತೆ, ಗಾಂಧಿ ನಗರ ಹಾಗೂ ಮಲ್ಲೇಶರಂನ ಹಲವು ಚಿನ್ನದಂಗಡಿಗಳ ಮಹಾಮೋಸವನ್ನು ಕವರ್ ಸ್ಟೋರಿ ತಂಡ ಬಟಾಬಯಲುಗೊಳಿಸಿದೆ. ಜಿಎಸ್​'ಟಿ ಇಲ್ಲದೆ ಚಿನ್ನ ಖರೀದಿಸಿದ ಗ್ರಾಹಕರಿಗೆ ಕೇವಲ ಎಸ್ಟಿಮೇಟ್​ ಬಿಲ್ ನೀಡುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವ ಚಿನ್ನದ ವ್ಯವಹಾರವನ್ನು ನಿಮ್ಮ ಮುಂದೆ ಕವರ್ ಸ್ಟೋರಿ ಬಿಚ್ಚಿಟ್ಟಿದೆ.

ಹಾಗಾಗಿ ಸ್ನೇಹಿತರೆ ತೆರಿಗೆ ಬಗ್ಗೆ ಭಯ ಬೇಡ. ಜಿಎಸ್'​ಟಿ ಬಗ್ಗೆ ಅಸಡ್ಡೆಯೂ ಬೇಡ. ಅಸಡ್ಡೆ ಮಾಡಿದ್ರೆ ಮುಂದೊಂದು ದಿನ ನೀವೇ ಅಪಾಯಕ್ಕೆ ಸಿಲುಕಿಕೊಳ್ತೀರ ಜೋಕೆ. ಚಿನ್ನದ ಬೇಟೆ ಕುರಿತು ಇಂದು ಬೆಳಗ್ಗೆ 10 ಗಂಟೆಗೆ ವಿಶೇಷ ಚರ್ಚೆ ನಡೆಯಲಿದ್ದು, ತಪ್ಪದೇ ವೀಕ್ಷಿಸಿ...

ವರದಿ: ವಿಜಯಲಕ್ಷ್ಮಿ ಶಿಬರೂರು(ಕವರ್ ಸ್ಟೋರಿ ತಂಡ)