ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿ ಕೊಳ್ಳುವ ಹಾವೇರಿ, ಯಾಲಕ್ಕಿ ಕಂಪಿನ ನಾಡು ಎಂದೇ ಹೆಸರುವಾಸಿ. ಜಿಲ್ಲೆಯಲ್ಲಿ ಯಾಲಕ್ಕಿ ಬೆಳೆಯದಿದ್ದರು, ಇಲ್ಲಿ ತಯಾರಾಗುವ ಯಾಲಕ್ಕಿ ಮಾಲೆ ವಿಶ್ವದೆಲ್ಲೆಡೆ ಹೆಸರುವಾಸಿ. ಇದೇ ಕಾರಣಕ್ಕೆ ಇದನ್ನ ಯಾಲಕ್ಕಿ ನಾಡು ಎಂದು ಕರೆಯುತ್ತಾರೆ. ಈಗ ಇದೆ ಯಾಲಕ್ಕಿ ನಾಡು ಚಿನ್ನದ ನಾಡು ಎಂದು ಕರೆಸಿಕೊಳ್ಳುವ ಸಮಯ ಬಂದಿದೆ. ಹಾವೇರಿಯಿಂದ ಅನತಿ ದೂರದಲ್ಲಿರುವ ಗಣಜೂರು ಗ್ರಾಮದ ಸುತ್ತಮತ್ತ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಡೆಕ್ಕನ ಮೈನಿಂಗ್ ಕಂಪನಿಯರು 2010ರಲ್ಲೆ ಇಲ್ಲಿ ಭೂಮಿಯನ್ನು ನೋಡಿದ್ದರು. ಈಗ ಸುಮಾರು 72 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಎಲ್ಲೆಲ್ಲಿ ಎಷ್ಟೆಷ್ಟು ಇದೆ ಎನ್ನುವುದನ್ನ ಪತ್ತೆ ಮಾಡಲಾಗುತ್ತಿದೆ. ಡೆಕ್ಕನ್ ಕಂಪನಿಯವರು ಭೂಮಿಯಲ್ಲಿ ಬೊರವೆಲ್ ಕೊರೆದು ಚಿನ್ನದ ನಿಕ್ಷೇಪ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಾವೇರಿ(ನ.27): ಯಾಲಕ್ಕಿ ಕಂಪಿನ ನಾಡು ಹಾವೇರಿ, ಇನ್ನು ಮುಂದೆ ಚಿನ್ನದ ನಾಡು ಎಂದು ಕರೆಸಿಕೊಳ್ಳುವ ಕಾಲ ಹತ್ತಿರ ಬಂದಿದೆ. ಜಿಲ್ಲೆಯಲ್ಲಿ ಚಿನ್ನದ ಗಣಿಗಾರಿಕೆ ಶೀಘ್ರದಲ್ಲೆ ಆರಂಭವಾಗುವ ಲಕ್ಷಣಗಳಿದೆ. ರೈತರ ಬೇಡಿಕೆಗಳು ಇಡೇರಿದರೆ ಹಾವೇರಿ ಇನ್ನು ಮುಂದೆ ಚಿನ್ನದ ನಾಡಾಗಲಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿ ಕೊಳ್ಳುವ ಹಾವೇರಿ, ಯಾಲಕ್ಕಿ ಕಂಪಿನ ನಾಡು ಎಂದೇ ಹೆಸರುವಾಸಿ. ಜಿಲ್ಲೆಯಲ್ಲಿ ಯಾಲಕ್ಕಿ ಬೆಳೆಯದಿದ್ದರು, ಇಲ್ಲಿ ತಯಾರಾಗುವ ಯಾಲಕ್ಕಿ ಮಾಲೆ ವಿಶ್ವದೆಲ್ಲೆಡೆ ಹೆಸರುವಾಸಿ. ಇದೇ ಕಾರಣಕ್ಕೆ ಇದನ್ನ ಯಾಲಕ್ಕಿ ನಾಡು ಎಂದು ಕರೆಯುತ್ತಾರೆ. ಈಗ ಇದೆ ಯಾಲಕ್ಕಿ ನಾಡು ಚಿನ್ನದ ನಾಡು ಎಂದು ಕರೆಸಿಕೊಳ್ಳುವ ಸಮಯ ಬಂದಿದೆ.

ಹಾವೇರಿಯಿಂದ ಅನತಿ ದೂರದಲ್ಲಿರುವ ಗಣಜೂರು ಗ್ರಾಮದ ಸುತ್ತಮತ್ತ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಡೆಕ್ಕನ ಮೈನಿಂಗ್ ಕಂಪನಿಯರು 2010ರಲ್ಲೆ ಇಲ್ಲಿ ಭೂಮಿಯನ್ನು ನೋಡಿದ್ದರು. ಈಗ ಸುಮಾರು 72 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವನ್ನು ಎಲ್ಲೆಲ್ಲಿ ಎಷ್ಟೆಷ್ಟು ಇದೆ ಎನ್ನುವುದನ್ನ ಪತ್ತೆ ಮಾಡಲಾಗುತ್ತಿದೆ. ಡೆಕ್ಕನ್ ಕಂಪನಿಯವರು ಭೂಮಿಯಲ್ಲಿ ಬೊರವೆಲ್ ಕೊರೆದು ಚಿನ್ನದ ನಿಕ್ಷೇಪ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಗಣಜೂರು ಸುತ್ತಮುತ್ತ 200 ಎಕರೆ ಭೂಮಿ ನೀಡುವಂತೆ ಕಂಪನಿಯರು ಸರಕಾರಕ್ಕೆ ಕೇಳಿದ್ದಾರೆ. ಕೆಐಡಿಬಿಯವರು ಈ ಭೂಮಿಯನ್ನು ರೈತರಿಂದ ವಶಪಡೆದುಕೊಳ್ಳುವ ಪ್ರಕ್ರೀಯೆ ಪ್ರಾರಂಭಿಸಿದ್ದಾರೆ. ಬಹುತೇಕ ರೈತರು ಸಹ ಭೂಮಿ ನೀಡಲು ಸಿದ್ದರಿದ್ದಾರೆ. ಹಲವು ಸಲ ರೈತರೆಲ್ಲರು ಸೇರಿ ಮಾತನಾಡಿಕೊಂಡಿದ್ದು, ಒಂದು ಎಕರೆಗೆ 40 ರಿಂದ 50 ಲಕ್ಷ ಹಣ ನೀಡಿದರೆ, ಭೂಮಿ ನಿಡುವುದಾಗಿ ಹೇಳುತ್ತಿದ್ದಾರೆ.

ಎಲ್ಲವು ಅಂದುಕೊಂಡಂತೆ ಆದರೆ, ಹಾವೇರಿ ಮುಂದಿನ ದಿನಗಳಲ್ಲಿ ಚಿನ್ನದ ನಾಡು ಎಂದು ಕರೆಸಿಕೊಳ್ಳಲಿದೆ. ಇದಕ್ಕೆ ರೈತರ ಜತೆಗೆ ಭೂಮಿ ವಿಷಯವಾಗಿ ನಡೆಯುವ ಮಾತುಕತೆ ಅಂತಿಮವಾಗಿದ್ದು, ಸರಕಾರ ನೀಡುವ ಬೆಲೆಗೆ ರೈತರು ಭೂಮಿ ನೀಡುತ್ತಾರಾ ಎನ್ನುವುದನ್ನ ಈಗ ಕಾದು ನೋಡಬೇಕಿದೆ.