ಲೂಯಿಸ್ ವೃತ್ತಿಯಲ್ಲಿ ಟೆಲಿವಿಷನ್ ಕೇಬಲ್ ನೆಟ್ ವರ್ಕ್ ನ ಮುಖ್ಯಸ್ಥ, ಮುಂಬೈ ನಲ್ಲಿ ಡೆನ್ ನೆಟ್ ವರ್ಕ್ ನಡೆಸುತ್ತಾರೆ. ಅತ್ತೂರಿನ ಚರ್ಚ್ ನ ಮಹಿಮೆಗಳನ್ನು ತಿಳಿದು ಅವರು ಇಲ್ಲಿಗೆ ಬಂದಿದ್ದಾರೆ.

ಉಡುಪಿ (ಜ.28): ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರಸಿದ್ಧ ಅತ್ತೂರು ಜಾತ್ರೆಯಲ್ಲಿ ಓರ್ವ ಗೋಲ್ಡ್ ಮ್ಯಾನ್ ಕಾಣಿಸಿಕೊಂಡಿದ್ದಾನೆ.

ಮುಂಬೈನ ಕುರ್ಲಾದ ಲೂಯಿಸ್ ಎಂಬವರು ತನ್ನ ಮೈಮೇಲೆ ಧರಿಸಿದ್ದ ಆಭರಣಗಳಿಂದಾಗಿ ಅತ್ತೂರು ಜಾತ್ರೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದ ಘಟನೆ ನಡೆದಿದೆ.

ಲೂಯಿಸ್ ವೃತ್ತಿಯಲ್ಲಿ ಟೆಲಿವಿಷನ್ ಕೇಬಲ್ ನೆಟ್ ವರ್ಕ್ ನ ಮುಖ್ಯಸ್ಥ, ಮುಂಬೈ ನಲ್ಲಿ ಡೆನ್ ನೆಟ್ ವರ್ಕ್ ನಡೆಸುತ್ತಾರೆ. ಅತ್ತೂರಿನ ಚರ್ಚ್ ನ ಮಹಿಮೆಗಳನ್ನು ತಿಳಿದು ಅವರು ಇಲ್ಲಿಗೆ ಬಂದಿದ್ದಾರೆ.

ಇವರ ಮೈ ಮೇಲೆ ಏನಿಲ್ಲಾ ಅಂದ್ರೂ ಎರಡು ಕೆ.ಜಿ ಚಿನ್ನ ಇದೆ. ಆದರೆ ಎಲ್ಲವೂ ಕಾನೂನುಬದ್ದ ಖರೀದಿ ಅನ್ನೋದು ಇಲ್ಲಿ ಮುಖ್ಯ.

ಇವರ ಮನೆಯಲ್ಲಿ ಯಾರಿಗೂ ಚಿನ್ನದ ಮೋಹವಿಲ್ಲ. ಲೂಯಿಸ್ ಕಳೆದ 25 ವರ್ಷಗಳಿಂದ ಇದೇ ರೀತಿ ಚಿನ್ನ ಧರಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಜಾತ್ರೆಯಲ್ಲಿ ಜನ ತಾಮುಂದು ನಾಮುಂದು ಅಂತ ಮುಗಿಬಿದ್ದು ಲೂಯಿಸ್ ಸೆಲ್ಫೀ ತಗೊಂಡಿದ್ದಾರೆ.