ಚಿನ್ನದ ದರದಲ್ಲಿ ಕೊಂಚ ಮಟ್ಟಿನ ಏರಿಕೆ

Gold futures up 0.13 per cent on positive global cues
Highlights

 ವಾಣಿಜ್ಯಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ನಿರಂತರವಾಗಿ ಏರಿಳಿತ ಕಂಡು ಬರುತ್ತಿದೆ, ಸದ್ಯ ಚಿನಿವಾರ ಮಾರುಕಟ್ಟೆಯಲ್ಲಿ  ಚಿನ್ನದ ದರದಲ್ಲಿ ಕೊಂಚ ಮಟ್ಟಿನಲ್ಲಿ ಏರಿಕೆ ಕಂಡು ಬಂದಿದೆ. 

ನವದೆಹಲಿ : ವಾಣಿಜ್ಯಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ನಿರಂತರವಾಗಿ ಏರಿಳಿತ ಕಂಡು ಬರುತ್ತಿದೆ, ಸದ್ಯ ಚಿನಿವಾರ ಮಾರುಕಟ್ಟೆಯಲ್ಲಿ  ಚಿನ್ನದ ದರದಲ್ಲಿ ಕೊಂಚ ಮಟ್ಟಿನಲ್ಲಿ ಏರಿಕೆ ಕಂಡು ಬಂದಿದೆ. 

ಪ್ರತೀ 10 ಗ್ರಾಂ ಚಿನ್ನದ ಮೇಲೆ  ಶೇ. 0.13 ರು.ನಷ್ಟು ಏರಿಕೆ ಕಂಡು ಬಂದಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆಯು ಸದ್ಯ 31,350 ರು.ಗಳಷ್ಟಿದೆ. ಇದರಿಂದ ಚಿನಿವಾರ ಮಾರುಕಟ್ಟೆಯಲ್ಲಿ ಸಕಾರಾತ್ಮಕವಾದ ವ್ಯವಹಾರ ಕಂಡು ಬಂದಿದೆ.

ಕಳೆದ ತಿಂಗಳಿನಿಂದಲೂ ಕೂಡ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಳಿಕೆಯೂ ನಿರಂತರವಾಗಿ ಕಂಡು ಬರುತ್ತಿದೆ. ಅಕ್ಷಯ ತೃತೀಯ ಸಂದರ್ಭದಲ್ಲಿಯೂ ಕೂಡ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತು. 

ಮಾರುಕಟ್ಟೆಯ ತಜ್ಞರ ಪ್ರಕಾರವಾಗಿ ಚಿನ್ನದ ದರದಲ್ಲಿನ ಅಲ್ಪ ಮಟ್ಟಿನ ಏರಿಕೆಯು  ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಸಾಕಾರಾತ್ಮಕವಾದ ವ್ಯವಹಾರ ನಡೆಯಲು ಸಹಕಾರಿಯಾಗಬಹುದು ಎಂದು ಹೇಳಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದೂ ಕೂಡ ಹೇಳಿದ್ದಾರೆ.

ಸದ್ಯ ಭಾರತದಲ್ಲಿ ಮದುವೆ ಸೀಜನ್ ಆಗಿದ್ದು ಈ ಸಂದರ್ಭದಲ್ಲಿ ಬಂಗಾರವನ್ನು ಕೊಳ್ಳುವವರ ಪ್ರಮಾಣವೂ ಕೂಡ ಏರಿಕೆಯಾಗುತ್ತಿದೆ.  

loader