ಚಿನ್ನ ಪ್ರಿಯರಿಗೆ ಒಂದು ಶುಭ ಸುದ್ದಿ, ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ.
ನವದೆಹಲಿ (ಜ.08): ಚಿನ್ನ ಪ್ರಿಯರಿಗೆ ಒಂದು ಶುಭ ಸುದ್ದಿ, ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ.
10 ಗ್ರಾಂ ಚಿನ್ನದ ಬೆಲೆಯು 29,198 ರು.ಗೆ ಇಳಿಕೆಯಾಗಿದೆ. ಆದ್ದರಿಂದ ಚಿನ್ನ ಕೊಳ್ಳುವವರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಕೂಡ ಬಂಗಾರದ ಬೆಲೆ ಇಳಿಯಲು ಕಾರಣವಾಗಿದೆ.
