65 ಲಕ್ಷದ ಆಭರಣ ಕಸದ ರಾಶಿಗೆ!

First Published 18, Mar 2018, 10:16 AM IST
Gold dumped in Dustbin
Highlights

ಮನೆಯಲ್ಲಿ ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಗೆಸೆಯುತ್ತೇವೆ. ಆದರೆ, ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಮಹಿಳೆಯೊಬ್ಬಳು ಯಾವುದೋ ಗುಂಗಿನಲ್ಲಿ 65 ಲಕ್ಷ ರು. ಮೌಲ್ಯದ ಆಭರಣವನ್ನು ಕಸದ ಬುಟ್ಟಿಗೆ ಹಾಕಿದ್ದಾಳೆ.

ಮನೆಯಲ್ಲಿ ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಗೆಸೆಯುತ್ತೇವೆ. ಆದರೆ, ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಮಹಿಳೆಯೊಬ್ಬಳು ಯಾವುದೋ ಗುಂಗಿನಲ್ಲಿ 65 ಲಕ್ಷ ರು. ಮೌಲ್ಯದ ಆಭರಣವನ್ನು ಕಸದ ಬುಟ್ಟಿಗೆ ಹಾಕಿದ್ದಾಳೆ.

ತಾನು ಆಭರಣವನ್ನು ಕಸದ ಬುಟ್ಟಿಗೆ ಎಸೆದಿರುವುದು ಆಕೆಗೆ ತಡವಾಗಿ ಮನೆವರಿಕೆಯಾಗಿದ್ದು, ಅಷ್ಟರಲ್ಲಾಗಲೇ ಕಸವನ್ನು ಸಾಗಿಸಲಾಗಿತ್ತು. ಇದರಿಂದ ಕಂಗಾಲಾದ ಆಕೆ, ಕೂಡಲೇ ಪೌರಾಡಳಿತ ಕಚೇರಿಗೆ ಕರೆ ಮಾಡಿ ತಾನು ಮಾಡಿದ ಎಡವಟ್ಟನ್ನು ಹೇಳಿದ್ದಾಳೆ.

ಬಳಿಕ ನೈರ್ಮಲ್ಯ ಕಾರ್ಮಿಕರು 10 ಟನ್‌ ಕಸದ ರಾಶಿಯನ್ನು 3 ಗಂಟೆಗೂ ಹೆಚ್ಚುಕಾಲ ತಡಕಾಡಿ ಕೊನೆಗೂ ಆಭರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಕಪ್ಪು ಬ್ಯಾಗ್‌ನಲ್ಲಿ ಇದ್ದ ಆಭರಣ ಮರಳಿ ಸಿಕ್ಕಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾಳೆ.

loader