ಮದುವೆಗೆ ತಂದಿದ್ದ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳರ ಪಾಲಾಗಿರುವ ಘಟನೆ ಚಿತ್ರದುರ್ಗ ನಗರದ ಮುನ್ಸಿಪಲ್ ಕಾಲೋನಿಯಲ್ಲಿ ನಡೆದಿದೆ. ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಚಿತ್ರದುರ್ಗ (ಡಿ.10): ಮದುವೆಗೆ ತಂದಿದ್ದ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳರ ಪಾಲಾಗಿರುವ ಘಟನೆ ಚಿತ್ರದುರ್ಗ ನಗರದ ಮುನ್ಸಿಪಲ್ ಕಾಲೋನಿಯಲ್ಲಿ ನಡೆದಿದೆ. ಮನೆ ಬೀಗ ಮುರಿದು ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಅಲ್ಲದೇ 10 ಸಾವಿರ ನಗದನ್ನೂ ಕೂಡ ಕದ್ದೊಯ್ದಿದ್ದಾರೆ. ಕಳೆದ 10 ದಿನಗಳ ಹಿಂದಷ್ಟೇ ಇಲ್ಲಿನ ನಿವಾಸಿಯಾಗಿರುವ ವೀರಭದ್ರಪ್ಪ ಎಂಬುವರ ಪುತ್ರನ ಮದುವೆ ನಡೆದಿತ್ತು. ಮದುವೆಗೆಂದು ತಂದಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಖದೀಮರು ಮನೆಯ ಒಳಭಾಗದ ಕಿಟಕಿ ಮೂಲಕ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.
ಸದ್ಯ ಸ್ಥಳಕ್ಕೆ ಮುನ್ಸಿಪಲ್ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
