ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ಆರ್​ಟಿಇ ಕಾಯ್ದೆ ಕಾರಣವಾಗಿದ್ದು, ಕಳೆದ ನಾಲ್ಕು ವರ್ಷದಲ್ಲಿ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ 2200 ಕೋಟಿ ಹಣ ನೀಡಿದೆ.

ಬೆಂಗಳೂರು(ಅ.14): ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಜೆಡಿಎಸ್ ಗೋಕಾಕ್ ಮಾದರಿಯಲ್ಲಿ ಚಳುವಳಿ ರೂಪಿಸಲಿದೆ ಎಂದು ಜೆಡಿಎಸ್ ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೇವಣ್ಣ ಮಾತನಾಡಿ, ರಾಜ್ಯದಲ್ಲಿ 2500 ಪ್ರಾಥಮಿಕ ಶಾಲೆಗಳಿಗೆ ಬೀಗ ಹಾಕಲು ಸರ್ಕಾರ ಮುಂದಾಗಿದೆ. ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಸಹಕಾರ ಕೊಡುತ್ತಿದೆ ಎಂದು ಆರೋಪಿಸಿದರು.

ಶಾಸಕ ವೈಎಸ್.ವಿ ದತ್ತಾ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲು ಆರ್​ಟಿಇ ಕಾಯ್ದೆ ಕಾರಣವಾಗಿದ್ದು, ಕಳೆದ ನಾಲ್ಕು ವರ್ಷದಲ್ಲಿ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ 2200 ಕೋಟಿ ಹಣ ನೀಡಿದೆ. ಅದರ ಬದಲು ಸರ್ಕಾರಿ ಶಾಲೆಗಳನ್ನು ಬಲ ಪಡಿಸಬೇಕು ಎಂದು ಆಗ್ರಹಿಸಿದರು.