ನನ್ನ ಹಿಂದೆ ದೇವರು, ಜನರಿದ್ದಾರೆ, ಬಿಜೆಪಿಯಲ್ಲ: ರಜನಿ

First Published 21, Mar 2018, 7:52 AM IST
God Is With Me Says Rajinikanth
Highlights

ತಮ್ಮ ರಾಜಕೀಯ ಪ್ರವೇಶದ ಹಿಂದೆ ಬಿಜೆಪಿಯ ಬೆಂಬಲವಿದೆ ಎಂಬ ಗುಮಾನಿಯನ್ನು ನಟ ರಜನೀಕಾಂತ್‌ ತಳ್ಳಿಹಾಕಿದ್ದಾರೆ.

ಚೆನ್ನೈ: ತಮ್ಮ ರಾಜಕೀಯ ಪ್ರವೇಶದ ಹಿಂದೆ ಬಿಜೆಪಿಯ ಬೆಂಬಲವಿದೆ ಎಂಬ ಗುಮಾನಿಯನ್ನು ನಟ ರಜನೀಕಾಂತ್‌ ತಳ್ಳಿಹಾಕಿದ್ದಾರೆ. ಉತ್ತರಾಖಂಡದಲ್ಲಿ ಕೆಲವು ಬಿಜೆಪಿ ಸದಸ್ಯರನ್ನು ಭೇಟಿ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ರಜನೀಕಾಂತ್‌, ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ.

ಆರಂಭದಿಂದಲೂ ನನ್ನ ಹಿಂದೆ ಬಿಜೆಪಿ ಇದೆ ಎಂಬ ಮಾತನ್ನು ಆಡಲಾಗುತ್ತಿದೆ. ಆದರೆ, ದೇವರು ಮತ್ತು ಜನರು ಮಾತ್ರ ನನ್ನ ಹಿಂದೆ ಇದ್ದಾರೆ ಎಂದು ಹೇಳಿದ್ದಾರೆ. ಹಿಮಾಲಯಕ್ಕೆ ಅಧ್ಯಾತ್ಮಿಕ ಯಾತ್ರೆ ಕೈಗೊಂಡಿದ್ದ ರಜನೀಕಾಂತ್‌ ಚೆನ್ನೈಗೆ ಮರಳಿದ್ದಾರೆ.

loader