ಗೋವಾದ ಸಿಡ್ನಿ ಲೆಮೋಸ್’ಗೆ 500 ವರ್ಷ ಜೈಲು! ಬೋಗಸ್ ಯೋಜನೆಗಳಲ್ಲಿ ಹಣ ಹೂಡುವಂತೆ ಮಾಡಿ ವಂಚನೆ

ಬೆಂಗಳೂರು: 200 ಮಿಲಿಯನ್ ಡಾಲರ್ ಹಗರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ಹಾಗೂ ಆತನ ಸಹೋದ್ಯೋಗಿಗೆ ದುಬೈಯಲ್ಲಿ 500 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Add Asianetnews Kannada as a Preferred SourcegooglePreferred

ಗೋವಾದ ಸಿಡ್ನಿ ಲೆಮೋಸ್ ಹಾಗೂ ಹಣಕಾಸು ತಜ್ಞ ರೆಯಾನ್ ಡಿ’ಸೋಜಾ ಎಂಬವರು 500 ವರ್ಷ ಜೈಲು ಶಿಕ್ಷೆಗೊಳಗಾದವರು.

ಬೋಗಸ್ ಯೋಜನೆಗಳಲ್ಲಿ ಹಣ ಹೂಡುವಂತೆ ಮಾಡಿ ಇವರಿಬ್ಬರು, ಸಾವಿರಾರು ಹೂಡಿಕೆದಾರರನ್ನು ವಂಚಿಸಿದದ್ದಾರೆನ್ನಲಾಗಿದೆ.

ತಮ್ಮ ಕಂಪನಿಯ ಮೂಲಕ $25000 ಹೂಡಿದರೆ ಶೇ.120 ರಷ್ಟು ವಾರ್ಷಿಕ ಲಾಂಭಾಂಶ ಪಡೆಯಬಹುದೆಂದು ಹೇಳಿ ಸಾವಿರಾರು ಮಂದಿಯಿಂದ ಕೋಟ್ಯಾಂತರ ಹಣವನ್ನು ಸಂಗ್ರಹಿಸಿದ್ದರು.

ಮೊದಮೊದಲು ಕೆಲ ಸಮಯದವರೆಗೆ ಲಾಭಾಂಶವನ್ನು ನೀಡುತ್ತಿದ್ದರು, ಬಳಿಕ ಲಾಭಾಂಶ ಪಾವತಿಸುವುದನ್ನು ನಿಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಬಳಿಕ ಜುಲೈ, 2016ರಲ್ಲಿ ಆ ಕಂಪನಿ ಕಚೇರಿಯನ್ನು ದುಬೈ ಅಧಿಕಾರಿಗಳು ಜಪ್ತಿ ಮಾಡಿದ್ದರು.