Asianet Suvarna News Asianet Suvarna News

ವಿಮಾನ ಪ್ರಯಾಣದ ಬಡವನ ಕನಸು ನನಸಾಗುತ್ತಿದೆ..!

ತನ್ನ ಕಂಪೆನಿಯ ವಿಮಾನಯಾನದಲ್ಲಿ 1299 ರು. ಕನಿಷ್ಟ ದರ ಘೋಷಿಸಿರುವ ಕಂಪೆನಿ 3 ದಿನಗಳ ಕಾಲ ಅಂದರೆ ಜೂ.5 ರಿಂದ 7ರವರೆಗೆ ಈ ರಿಯಾಯಿತಿ ಪ್ರಕಟಿಸಿತ್ತು. ಇದೀಗ ಜೂ.24 ರಿಂದ ಸೆ.30ರವರ ಅವಧಿಯಲ್ಲಿ ಈ ರಿಯಾಯಿತಿ ಮುಂದುವರಿಯಲಿದೆ.

GoAir Offers Monsoon Sale on Flights at Starting Fare of Rs.1299

ಬೆಂಗಳೂರು :  ಎಲ್ಲೆಲ್ಲೂ ಮಾನ್ಸೂನ್ ಆಫರ್‌ಗಳು. ವಿಮಾನಯಾನ ಸಂಸ್ಥೆಗಳೂ ಪ್ರಯಾಣದರದಲ್ಲಿ ಆಫರ್ ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮೂಲಕ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಬಡವನ ಕನಸು ನನಸಾಗುವುದರಲ್ಲಿದೆ.
 
ಬಹುತೇಕ ನಷ್ಟದಲ್ಲಿರುವ ಗೋ ಏರ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲೇ ಬೇಕಿದೆ. ಸ್ವಲ್ಪ ದಿನದ ಹಿಂದೆ ‘ಬ್ಯುಸಿನೆಸ್ ಲೈನ್’  ಪತ್ರಿಕೆ ನೀಡಿದ ಸಂದರ್ಶನದಲ್ಲಿ ಗೋ ಏರ್‌ನ ಸಿಇಒ ಜಾರ್ಜೋ ಡೆ ರೋನಿ, ಕಡಿಮೆ ಮೊತ್ತದ ಆಫರ್ ನೀಡಿ ಪ್ರಯಾಣಿಕರನ್ನು ಸೆಳೆಯುವುದಕ್ಕಿಂತ ಅತ್ಯುತ್ತಮ ಸೇವೆ ನೀಡುವುದು ನಮ್ಮ ಆದ್ಯತೆ ಎಂದಿದ್ದರು. 

ಇದಾಗಿ ಕೆಲವೇ ದಿನಗಳಲ್ಲಿ ಕಡಿಮೆ ದರ ರಿಯಾಯಿತಿ ಪ್ರಕಟಿಸಿ ಉಲ್ಟಾ ಹೊಡೆದಿದ್ದಾರೆ. ತನ್ನ ಕಂಪೆನಿಯ ವಿಮಾನಯಾನದಲ್ಲಿ 1299 ರು. ಕನಿಷ್ಟ ದರ ಘೋಷಿಸಿರುವ ಕಂಪೆನಿ 3 ದಿನಗಳ ಕಾಲ ಅಂದರೆ ಜೂ.5 ರಿಂದ 7ರವರೆಗೆ ಈ ರಿಯಾಯಿತಿ ಪ್ರಕಟಿಸಿತ್ತು. ಜೂ.24 ರಿಂದ ಸೆ.30ರವರ ಅವಧಿಯಲ್ಲಿ ಈ ರಿಯಾಯಿತಿ ಇರುತ್ತದೆ. ಆದರೆ ಈ ಆಫರ್‌ನಲ್ಲಿ ಬುಕ್ ಮಾಡಿರುವ ಏರ್‌ಟಿಕೆಟ್ ಅನ್ನು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ. ಹಾಗೇ ಕ್ಯಾನ್ಸಲ್ ಮಾಡಿದ್ರೆ ಹಣ ವಾಪಾಸ್ ಸಿಗಲ್ಲ.

ಗೋ ಏರ್ 1544 ವಿಮಾನಗಳನ್ನು ಹೊಂದಿದ್ದು, 23 ಸ್ಥಳಗಳಲ್ಲಿ ಕಾರ್ಯಾಚರಿಸುತ್ತವೆ. ಪ್ರತೀ ಬುಧವಾರ ಗೋ ಏರ್‌ನ ದರಗಳಲ್ಲಿ ರಿಯಾಯಿತಿ ಇರುತ್ತದೆ. 

Follow Us:
Download App:
  • android
  • ios