ಕಾಲೇಜಿಗೆ ತೆರಳುತ್ತಿದ್ದ ಯುವತಿಗೆ ಆದ ಕೆಟ್ಟ ಅನುಭವ ಆಕೆಯ ಸಾಕಷ್ಟು ದಿನದ ನಿದ್ರೆಯನ್ನು ಕಸಿದುಕೊಂಡಿದೆ. ಗೋವಾದ ಧೈರ್ಯಶಾಲಿ ಯುವತಿ ಹಸಿಬಾ ಅಮೀನ್ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ. ಮೀ ಟೂ ಆರೋಪಗಳ ನಡುವೆ ಇದೇನಿದು ಮತ್ತೊಂದು ಅಸಹ್ಯ...!
ಪಣಜಿ[ಅ.30] ಆಕೆ ಕಾಲೇಜಿಗೆ ಬಸ್ ನಲ್ಲಿ ತೆರಳುತ್ತಿದ್ದಳು. ಹತ್ತಿರದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಇನ್ನಷ್ಟು ಹತ್ತಿರಕ್ಕೆ ಬರುತ್ತಿದ್ದ. ಹತ್ತಿರ ಬಂದವ ಆಕೆಯನ್ನು ಮುಟ್ಟಿದ್ದ. ಇಷ್ಟೇ ಆಗಿದ್ದರೆ ಕತೆ ಬೇರೆ ಇರುತ್ತಿತ್ತು. ಹತ್ತಿರ ಬರುವ ವೇಳೆ ಆತ ತನ್ನಶಿಶ್ನವನ್ನು ಪ್ಯಾಂಟ್ ನಿಂದ ಹೊರಕ್ಕೆ ಹಾಕಿಕೊಂಡಿದ್ದ. ಯುವತಿ ಆತ ತನ್ನ ಮೊಬೈಲ್ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಭಾವಿಸಿ ಹಿಂದಕ್ಕೆ ತಿರುಗಿದಾಗ ನೋಡಬಾರದ್ದನ್ನೆಲ್ಲ ನೋಡಿ ಹೌಹಾರಿದ್ದಾರೆ.
ಯುವತಿ ಆರೋಪ ಮಾಡಿದ ಮೇಲೆ ಜನ ಒಂದಾಗಿದ್ದಾರೆ. ಆತನನ್ನು ಹಿಡಿದು ಪ್ರಶ್ನೆ ಮಾಡಿದ ಮೇಲೆ ಬೈ ಮಿಸ್ಟೇಕ್ ನಾನು ಪ್ಯಾಂಟ್ ಝಿಪ್ ಹಾಕುವುದನ್ನು ಮರೆತಿದ್ದೆ ಎಂದು ಹೇಳಿದ್ದು ಉದ್ದೇಶಪೂರ್ವಕವಾಗಿ ಹುಡುಗಿ ಕಡೆ ಬಂದಿಲ್ಲ ಎಂದು ಸಮರ್ಥನೆ ನೀಡಿದ್ದಾನೆ.
