ಸದ್ಯ ಗೋವಾ ಸಿಎಂ ಮನೋಹರ್ ಅವರು ಸದ್ಯ ಅನಾರೋಗ್ಯಕ್ಕೆ ತುತ್ತಾಗಿದ್ದು ಇದೇ ವೇಳೆ ರಾಜ್ಯಪಾಲೆ ಮೃದುಲಾ ಸಿನ್ಹಾ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟರು. 

ಪಣಜಿ: ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಅಸ್ವಸ್ಥರಾಗಿದ್ದು, ಭಾನುವಾರ ಸಂಜೆ ಕೆಲಹೊತ್ತು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿತಪಾಸಣೆಗೆ ಒಳಪಟ್ಟರು. 

ಸಂಜೆ ಮುಂಬೈನಿಂದ ಬಂದ ಕೂಡಲೇ ಅವರು ಅಸ್ವಸ್ಥರಾದರು. ಕೂಡಲೇ ಅವರನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಯಿತು ಎಂದು ಆಸ್ಪತ್ರೆ ಹಾಗೂ ರಾಜಭವನ ಮೂಲಗಳು ಹೇಳಿವೆ.

ಅವರಿಗೆ ಬಿ.ಪಿ. ನಿಯಂತ್ರಣದಲ್ಲಿ ಇರಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಈ ನಡುವೆ, ಅಸ್ವಸ್ಥರಾಗಿರುವ ಸಿಎಂ ಮನೋಹರ ಪರ್ರಿಕರ್ ಕೂಡ ಭಾನುವಾರ ಇದೇ ಆಸ್ಪತ್ರೆಯಲ್ಲಿ ‘ಮಾಮೂಲಿ’ ತಪಾಸಣೆಗೆ ಒಳಗಾದರು.