ಮಹದಾಯಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತವೆ. ಮಿತ್ರಪಕ್ಷಗಳ ಒತ್ತಡದಿಂದ ಗೊಂದಲಕ್ಕೀಡಾಗಿದ್ದ  ಸಿಎಂ ಮನೋಹರ್ ಪರ್ರಿಕರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆಗೆ ಸಿದ್ಧ ಎಂದು ಗೋವಾ ಹೇಳಿದೆ. ಗೋವಾ ಸಿಎಂ ಬರೆದ ಪತ್ರದ ಪ್ರತಿ  ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಬೆಂಗಳೂರು (ಡಿ.21): ಮಹದಾಯಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತವೆ. ಮಿತ್ರಪಕ್ಷಗಳ ಒತ್ತಡದಿಂದ ಗೊಂದಲಕ್ಕೀಡಾಗಿದ್ದ ಸಿಎಂ ಮನೋಹರ್ ಪರ್ರಿಕರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆಗೆ ಸಿದ್ಧ ಎಂದು ಗೋವಾ ಹೇಳಿದೆ. ಗೋವಾ ಸಿಎಂ ಬರೆದ ಪತ್ರದ ಪ್ರತಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಪರಿಕ್ಕರ್ ಪತ್ರದ ಪ್ರಮುಖಾಂಶಗಳು:-

ಕುಡಿಯುವ ನೀರು ವಿಚಾರದಲ್ಲಿ ಗೋವಾ ಆಕ್ಷೇಪಣೆ ಪ್ರಶ್ನೆಯಿಲ್ಲ ಆದರೂ ಈ ವಿಚಾರದಲ್ಲಿ ಚರ್ಚೆ ಮಾಡುವುದು ಈಗ ಅತ್ಯವಶ್ಯಕ. ಕರ್ನಾಟಕ ಹಾಗೂ ಗೋವಾ ಸರ್ಕಾರ ಚರ್ಚೆ ಅತ್ಯಂತ ಅವಶ್ಯಕ. ಮಹದಾಯಿ ನದಿ ವಿವಾದ ನ್ಯಾಯಾಧೀಕರಣದ ಸಲಹೆ ಹಿನ್ನೆಲೆಯಲ್ಲಿ ಎರಡೂ ಸರ್ಕಾರಗಳೂ ಈ ಬಗ್ಗೆ ಚರ್ಚಿಸುವುದು ಈಗ ಅತ್ಯಗತ್ಯ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಪತ್ರದಲ್ಲಿ ತಿಳಿಸಿದ್ದಾರೆ.