ಮಹದಾಯಿ ವಿಚಾರವಾಗಿ ಗೋವಾ ಸಿಎಂ ಮನೋಹರ್ ಪರ್ರಿಕರ್ ವಿರುದ್ಧ ಸಚಿವ ಎಂ.ಬಿ. ಪಾಟೀಲ್​ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ: ಮಹದಾಯಿ ವಿಚಾರವಾಗಿ ಗೋವಾ ಸಿಎಂ ಮನೋಹರ್ ಪರ್ರಿಕರ್ ವಿರುದ್ಧ ಸಚಿವ ಎಂ.ಬಿ. ಪಾಟೀಲ್​ ವಾಗ್ದಾಳಿ ನಡೆಸಿದ್ದಾರೆ.

ಗೋವಾ ಸಿಎಂ ಸಂವಿಧಾನಾತ್ಮಕವಾಗಿ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು, ಆದರೆ ಯಡಿಯೂರಪ್ಪನವರಿಗೆ ಬರೆದಿದ್ದಾರೆ. ಗೋವಾ ಸಿಎಂ ಪರ್ರಿಕರ್ ಅವರದ್ದು​ ‘ಡರ್ಟಿ ಪಾಲಿಟಿಕ್ಸ್’ ಎಂದು ಸಚಿವ ಪಾಟೀಲ್ ಹೇಳಿದ್ದಾರೆ.

ಗೋವಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಗೋವಾ ಸಿಎಂಗೆ 2 ಸಲ ಪತ್ರ ಬರೆದಿದ್ದರು, ದರೆ ಅದಕ್ಕೆ ಗೋವಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ಗೋವಾ ನೀರಾವರಿ ಸಚಿವ ಪಾಲೇಕರ್​ ಕರ್ನಾಟಕ ಸರ್ಕಾರದ ಕ್ರಮವನ್ನು ‘ಡರ್ಟಿ ಪಾಲಿಟಿಕ್ಸ್’ ಎಂದಿದ್ದರು.

ಅವರು ಪತ್ರದಲ್ಲಿ ಕೆಟ್ಟ ಶಬ್ದ ಬಳಸಿ ಸಿಎಂ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದರು; ಈಗ ಗೋವಾ ಸಿಎಂ ಮಾಡುತ್ತಿರುವುದೂ ಡರ್ಟಿ ಪಾಲಿಟಿಕ್ಸ್, ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಟಿ. ಪಾಟೀಲ್ ತಿರುಗೇಟು ನೀಡಿದ್ದಾರೆ.

ಪ್ರತಿಷ್ಠೆ ಇಲ್ಲ, ಚರ್ಚೆಗೆ ಸಿದ್ಧ’

ಕರ್ನಾಟಕ ಸರ್ಕಾರದ ನಿಲುವು ಪ್ರಕಟಿಸಿದ ಸಚಿವ ಎಂ.ಬಿ. ಪಾಟೀಲ್​, ರಾಜ್ಯದ ಜನ, ರೈತರ ಸಲುವಾಗಿ ಪ್ರತಿಷ್ಠೆ ಬದಿಗಿಟ್ಟು ಮಾತುಕತೆಗೆ ಸಿದ್ಧ. ಯಾವುದೇ ಸ್ಥಳ, ಯಾವುದೇ ದಿನಾಂಕದಂದು ಚರ್ಚಿಸಲು ಸಿದ್ಧವಿದ್ದೇವೆ. 2-3 ದಿನದಲ್ಲಿ ಸಭೆ ಕರೆಯಬೇಕೆಂದು ನಮ್ಮ ಕೋರಿಕೆ, ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮ ಬಿಟ್ಟು ಚರ್ಚೆಗೆ ಬರುತ್ತಾರೆ, ಎಂದು ಸಚಿವ ಪಾಟೀಲ್ ಹೇಳಿದ್ದಾರೆ.