ನಗರಗಳು ಆಧುನಿಕತೆಯ ಓಘಕ್ಕೆ ತೆರೆದುಕೊಳ್ಳುತ್ತಿದ್ದಂತೆ ನಗರಗಳೆಡೆಗೆ ಮುಖ ಮಾಡುತ್ತಿರುವ ಜನರ ಸಂಖ್ಯೆ ಅಧಿಕವಾಗುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದೆ. ಕೈಗಾರಿಕೆಗಳು ತಲೆಎತ್ತುತ್ತಿವೆ. ಇವೆಲ್ಲದರ ಪರಿಣಾಮವಾಗಿ ಜಾಗತಿಕ ತಾಪಮಾನದಲ್ಲಿ ಬದಲಾವಣೆಗಳಾಗುತ್ತಿವೆ. ಅವ್ಯವಸ್ಥಿತ ಕೈಗಾರಿಕೆಗಳು ಹಾಗೂ ಅತಿಯಾದ ಜನಸಂಖ್ಯೆಯೇ ತಾಪಮಾನ ಬದಲಾವಣೆಗೆ ಮೂಲ ಕಾರಣ ಎಂಬುದು ದಿನೇ ದಿನೇ ಸಾಬೀತಾಗುತ್ತಿದೆ.

ಕೇರಳ, ಕೊಡಗಿನಲ್ಲಿ ಉಂಟಾದ ಪ್ರವಾಹದ ಭೀಕರತೆ ಈಗ ಮಹಾನಗರಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಅದರಲ್ಲೂ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ ನಗರಗಳು ಪ್ರವಾಹದ ಭೀತಿ ಎದುರಿಸುತ್ತಿರುವ  ಸಾಲಿನಲ್ಲಿ ಮೊದಲ ಸ್ಥಾನದಲ್ಲಿವೆ. ಅಂದಾಜು 4 ಕೋಟಿ ಭಾರತೀಯರು ಸಮುದ್ರ ಮಟ್ಟದ ಏರಿಕೆ, ಜಾಗತಿಕ ತಾಪಮಾನ ಏರಿಕೆ ಮುಂತಾದ ಕಾರಣಗಳಿಂದಾಗಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

#GlobalWarmingEffect: 15 ದಿನದಲ್ಲಿ 10 ಸಾವಿರ ಒಂಟೆ ಕೊಲ್ಲಲು ಆದೇಶ

ಪ್ರವಾಹದಿಂದಾದ ಸಾವುಗಳು, ಆರ್ಥಿಕ ನಷ್ಟ ಮುಂತಾದ ವಿಷಯಗಳು ದಿನೇ ದಿನೇ ಸುದ್ದಿಯಾಗುತ್ತಿವೆ. ಈ ಎಲ್ಲವೂ ಮಹಾನಗರಿಗಳಿಗೂ ಉಳಿಗಾಲವಿಲ್ಲ ಎಂಬುದರ ಸೂಚಕವೇ ಎಂಬ ಅನುಮಾನ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಪ್ರವಾಹದ ಭೀತಿ ಎದುರಿಸಿರುತ್ತಿರುವ ಪ್ರಮುಖ ನಗರಗಳು ಯಾವುವು? ಯಾವ ರಾಜ್ಯದ ಎಷ್ಟು ಪ್ರದೇಶ ಪ್ರವಾಹದ ಅಪಾಯದಲ್ಲಿವೆ ಇತ್ಯಾದಿ ಮಾಹಿತಿ ಇಲ್ಲಿದೆ.

ಪ್ರವಾಹದ ಭೀತಿ ಇರುವ ಭಾರತದ ನಗರಗಳಲ್ಲಿ ಬೆಂಗಳೂರು ಎಷ್ಟನೇ ಸ್ಥಾನ

ಕೊಚ್ಚಿ: ಅತಿಯಾದ ಮಳೆಯಿಂದಾಗಿ ಪೆರಿಯಾರ್ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸದ್ಯ ಅಧಿಕಾರಿಗಳು ಇಡುಕ್ಕಿ ಅಣೆಕಟ್ಟಿನ ಗೇಟನ್ನು ತೆರೆದಿದ್ದಾರೆ. ಆಗಸ್ಟ್ 9ಕ್ಕೇ ನೀರಿನ ಮಟ್ಟ 2,401 ಅಡಿ ಮೀರಿದೆ. ಮುಂಜಾಗ್ರತಾ ಕ್ರಮವಾಗಿ ಕನಿಷ್ಠ 4000 ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ನದಿಯು ಕೊಚ್ಚಿ ಜನರು ವಾಸಿಸುವ ಕಿರಿದಾದ ಪ್ರದೇಶದ ನಡುವೆಯೇ ಹರಿದು ಹೋಗುತ್ತದೆ. ಕೊಚ್ಚಿಯು ಹಲವು ಹಿನ್ನೀರು ಹಾಗೂ ಜಲಮೂಲಗಳ ನಡುವೆಯೇ ಇದೆ. ಹಾಗಾಗಿ ಇಲ್ಲಿನ ಜನರು ಪ್ರವಾಹ ಭೀತಿ ನಡುವೆಯೇ ಜೀವಿಸಬೇಕಾಗುತ್ತದೆ.

ಗೋ ಹತ್ಯೆಯೇ ಜಾಗತಿಕ ತಾಪಮಾನ ಹೆಚ್ಚಲು ಕಾರಣ

ದೆಹಲಿ: ಇತ್ತೀಚೆಗೆ ಜುಲೈ 13ರಂದು 80 ಜನರು ಮಹಾಮಳೆಯಿಂದ ಸ್ವಲ್ಪವೇ ಸ್ವಲ್ಪ ಅಂತರದಲ್ಲಿ ಪಾರಾಗಿದ್ದಾರೆ. ಜುಲೈ 27ಕ್ಕೆ ಯಮುನಾ ನದಿ ಅಪಾಯಕಾರಿ ಮಟ್ಟ ತಲುಪಿದೆ. ಪ್ರವಾಹದ ಭೀತಿಯೂ ಅಲ್ಲಿ ಎದುರಾಗಿದೆ.

ಮುಂಬೈ: ಇದೇ ವರ್ಷ ಜುಲೈ 3ರಂದು ಅಂಧೇರಿ ಪಾದಾಚಾರಿ ಸೇತುವೆ ರೈಲ್ವೆ ಲೈನ್ ಮೇಲೆ ಬಿದ್ದು ಸಾಕಷ್ಟು ಅನಾಹುತ ಸಂಭವಿಸಿತ್ತು. ಅವ್ಯಸ್ಥಿತ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆ, ಅತಿಯಾದ ಜನಸಂಖ್ಯೆಯ ಕಾರಣದಿಂದಾಗಿ ಸ್ವಲ್ಪವೇ ಸ್ವಲ್ಪ ಮಳೆ ಸುರಿದರೂ ಮುಂಬೈ ನಗರಿ ತತ್ತರಿಸುತ್ತದೆ. ಈ ವರ್ಷ ಮುಂಬೈನಲ್ಲಿ ಇನ್ನಷ್ಟು ಮಳೆಯಾಗುವ ಮುನ್ಸೂಚನೆಯಿದೆ.

ಚೆನ್ನೈ: 1943, 1978, 1985, 2002 ಮತ್ತು 2005ರಲ್ಲಿ ಈ ನಗರವು ಹಲವಾರು ಬಾರಿ ಮಹಾಮಳೆ, ಚಂಡಮಾರುತಕ್ಕೆ ಸಾಕ್ಷಿಯಾಗಿದೆ. ನದಿ ನೀರು ಮತ್ತು ಒಳಚರಂಡಿ ನೀರು ಹರಿಯುವ ಕ್ರಮಬದ್ಧ ವ್ಯವಸ್ಥೆ ಇಲ್ಲದೆ 2015 ರಲ್ಲಿ ಭೀಕರ ಪ್ರವಾಹವನ್ನು ಕಂಡಿದೆ. ಈ ವರ್ಷವೂ ನಗರಕ್ಕೆ ಪ್ರವಾಹದ ಎಚ್ಚರಿಕೆ ದೊರೆತಿದೆ. 

ಬೆಂಗಳೂರು: ಭಾರತದ ಐಟಿ ಹಬ್ ಎಂದೇ ಹೆಸರಾದ ಬೆಂಗಳೂರು ನೈಸರ್ಗಿಕ ವಿಕೋಪಗಳು ನಗರ ಪ್ರದೇಶವನ್ನು ಹೇಗೆ ನಡುಗಿಸುತ್ತವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಅವ್ಯವಸ್ಥಿತ ರಸ್ತೆಗಳು ಮತ್ತು ಒಳಚರಂಡಿಗಳೇ ಇಲ್ಲಿನ ಕೃತಕ ಪ್ರವಾಹ ಪರಿಸ್ಥಿತಿಗೆ ಮೂಲ ಕಾರಣ. ತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಗ್ರಹಿಸದೆ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಅದು ಮಳೆಯಲ್ಲಿ ಚರಂಡಿ ಸೇರಿ ಪ್ರವಾಹಕ್ಕೆ ಕಾರಣವಾಗುತ್ತಿದೆ. ಪರಿಣಾಮ ಚರಂಡಿಗಳಲ್ಲಿ ಕೊಚ್ಚಿಹೋದ ಪ್ರಕರಣಗಳಿವೆ.ಮುಂದಿನ ತಿಂಗಳು ಇಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೊಲ್ಕತ್ತಾ: ಸರೋವರಗಳು, ಕಾಲುವೆಗಳು ಇಂದು ಮಾಯವಾಗಿ ಆ ಜಾಗದಲ್ಲಿ ಬೃಹದಾಕಾರದ ಕಟ್ಟಡಗಳು ತಲೆ ಎತ್ತಿವೆ. ಅಭಿವೃದ್ಧಿಯ ನಡುವೆ ಸುಸ್ಥಿರತೆ ಎಂಬುದಕ್ಕೇ ಜಾಗವೇ ಇಲ್ಲದಂತಾಗಿದೆ. ಕೊಲ್ಕತ್ತಾದಲ್ಲಿ ಈ ಬಾರಿ 400 ಮಿಲಿ ಮೀಟರ್ ಮಳೆ ಯಾಗಿದ್ದು, ಈ ವರ್ಷ ಕಳೆದ 5 ವರ್ಷ ಕ್ಕಿಂತಲೂ ಹೆಚ್ಚು ಮಳೆಯಾಗಿದೆ.

ತಾಪಮಾನ ಏರಿಕೆ: ಹುಟ್ಟುವ ಮಕ್ಕಳಿಗೆ ಜೀವಮಾನ ಪೂರ್ತಿ ತೊಂದರೆ

ನಾಸಾದಿಂದಲೂ ಪ್ರವಾಹದ ಎಚ್ಚರಿಕೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಸಿದ್ಧಪಡಿಸಿದ ನಗರ ಪ್ರವಾಹ ನಿರ್ವಹಣೆ ವರದಿಯು ದೇಶದ ನಗರಗಳಲ್ಲಿ ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣ ಬಹುದೊಡ್ಡ ಸಮಸ್ಯೆ ಸೃಷ್ಟಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಇನ್ನು, ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2050ರ ವೇಳೆಗೆ ದೇಶದ ಕನಿಷ್ಠ ಶೇ.50ರಷ್ಟು ಪ್ರದೇಶಗಳು ನಗರೀಕರಣಗೊಂಡಿರುತ್ತ ವೆ ಎಂದು ಹೇಳಿದೆ.

ಅಂದರೆ, ದೇಶದ ಬಹುತೇಕ ಪ್ರದೇಶಗಳು ಕಾಂಕ್ರಿಟೀಕರಣಗೊಂಡಿರುತ್ತ ವೆ. ಆಗ ನೈಸರ್ಗಿಕವಾಗಿ ನೀರಿನ ಹರಿವಿಗೆ ಅವಕಾಶವಿರುವುದಿಲ್ಲ. ನಿರ್ಮಾಣಗೊಂಡ ಒಳಚರಂಡಿ ವ್ಯವಸ್ಥೆ ಅವ್ಯವಸ್ಥಿತವಾಗಿರುತ್ತದೆ. ಪರಿಣಾಮ ನಗರ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುತ್ತವೆ. ಈಗಾಗಲೇ ಜಾಗತಿಕ ತಾಪಮಾನ ಅಧಿಕವಾಗಿ ಹಿಮ ಕರಗುತ್ತಿರುವುದರಿಂದ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತದೆ.

ಇದರಿಂದ ಸಮುದ್ರದ ದಡದಲ್ಲಿರುವ ಮಂಗಳೂರು, ಮುಂಬೈ ನಗರಗಳಿಗೆ ಅಪಾಯ ಇದೆ ಎಂದು ನಾಸಾ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅಲ್ಲದೆ ಮುಂದಿನ ಒಂದು ಶತಮಾನದಲ್ಲಿ ಮಂಗಳೂರಿನ ಸಮುದ್ರ ಮಟ್ಟ 15.98 ಸೆ.ಮೀ. ಏರಿಕೆಯಾಗಲಿದೆ. ಹಾಗೆಯೇ ಅಂಡಮಾನ್ ಮತ್ತು ನಿಕೋಬಾರ್‌ಗಳು ಹಿಮ ಕರಗುವಿಕೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಲಿವೆ ಎಂದು ವಿಶ್ವಬ್ಯಾಂಕ್ ಕಳೆದ ವರ್ಷ ಹೇಳಿತ್ತು. ಆರ್ಥಿಕ ಸಹಕಾರ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಮುಂಬೈ ಮತ್ತು ಕೊಲ್ಕತ್ತಾ ನಗರಗಳು 2070ರ ವೇಳೆಗೆ ಸಂಪೂರ್ಣ ಮುಳುಗಡೆಯಾಗಲಿವೆ ಎಂದು ಹೇಳಲಾಗಿದೆ!